

ಹುಬ್ಬಳ್ಳಿ: ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಹಾಗೂ ರಾಮನಗರದ ಹರಿಜನ ಕನ್ನಡ ಹೆಣ್ಣು ಮಕ್ಕಳ ಶಾಲೆ ಇವುಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಇಲ್ಲಿಯ ಘಂಟಿಕೇರಿ ನೇತಾಜಿ ಸುಭಾಸಚಂದ್ರ ಭೋಸ್ ಆವಾಸೀಯ ವಿದ್ಯಾಲಯದ ವಿದ್ಯಾಥಿರ್ಗಳು ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪಗೌಡ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಸ್. ಶಿವಳ್ಳಿಮಠ, ದೈಹಿಕ ಶಿಕ್ಷಣಾಧಿಕಾರಿ ಕೆ. ನಾಗರಾಜಪ್ಪ ಅವರು ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು.
ದೈಹಿಕ ಶಿಕ್ಷಣ ಶಿಕ್ಷಕ ಬಿ.ವೈ. ಹೊಸಮನಿ, ಎಸ್.ವಿ. ನಾಡಗೇರ, ಪುಷ್ಪಲತಾ ಬಿ.ಜಿ, ಎಂ.ಎಸ್. ತೆವರಿಮಠ, ಚನ್ನವಿರಯ್ಯ ಹಿರೇಮಠ, ಭಾರತಿ ಹೆಗ್ಗಣ್ಣವರ, ಶಾರದಾ ಬಂಡಿ ಇತರರು ವಿಜೇತ ತಂಡದ ನಾಯಕರಾದ ರೇಣುಕಾ ಕೊಕರೆ, ಗಂಗಾರಾಮ ಕೊಕರೆ, ಉತ್ತಮ ರೈಡರ್ ಅವಿನಾಶ ಅವರಿಗೆ ಅಭಿನಂದಿಸಿದರು.