

ಹುಬ್ಬಳ್ಳಿ: ದೇಸಿ ಆಟವಾದ ಕಬಡ್ಡಿಗೆ ಇದೀಗ ಹೆಚ್ಚಿನ ಬೆಂಬಲ ಮತ್ತು ಪ್ರೋತ್ಸಾಹ ಸಿಗುತ್ತಿದೆ. ಇದಕ್ಕೆ ಇನ್ನಷ್ಟು ಪ್ರಚಾರ ನೀಡಬೇಕಾಗಿದೆ, ಕಾಮನ್ವೆಲ್ತ್ ಮತ್ತು ಒಲಿಪಿಂಕ್ ಗಳಲ್ಲಿ ಸೇರಿಸಬೇಕು ಎಂದು ಅಂತಾರಾಷ್ಟ್ರೀಯ ಕಬಡ್ಡಿ ತರಬೇತುದಾರ ಡಾ. ಈಶ್ವರ ಅಂಗಡಿ ಅಭಿಪ್ರಾಯಪಟ್ಟರು.
ಇಲ್ಲಿಯ ಕೆಎಲ್ಇ ಸಂಸ್ಥೆಯ ಗುರುಸಿದ್ದಪ್ಪ ಕೋತಂಬ್ರಿ ಕಾನೂನು ಮಹಾವಿದ್ಯಾಲಯದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಂತರ್ ಕಾಲೇಜು ಪುರುಷರ ಕಬಡ್ಡಿ ಪಂದ್ಯಾವಳಿಯ ಸಮಾರೋಪದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.
ಯಾವುದೇ ಪ್ರೋ ಕಬಡ್ಡಿ ಪಂದ್ಯಕ್ಕೆ ಕಡಿಮೆ ಇಲ್ಲದಂತೆ ಅತ್ಯುತ್ತಮವಾಗಿ ಆಯೋಜನೆ ಮಾಡಲಾಗಿದೆ. ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ಕಾನೂನಿನ ಜ್ಞಾನದ ಜತೆ ವಿದ್ಯಾಥಿರ್ಗಳು ತಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಇದು ಸಹಕಾರಿ ಎಂದರು.
ಕಾನೂನು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಖಾಲೀದ ಖಾನ ಮಾತನಾಡಿ, ಎಲ್ಲ ಕಾಲೇಜಿನ ದೈಹಿಕ ಶಿಣ ನಿರ್ದೇಶಕರು ತಮ್ಮ ವಿದ್ಯಾಥಿರ್ಗಳಿಗೆ ತರಬೇತಿ ನೀಡಲು ಕೈಗೊಂಡಿರುವ ಪ್ರಯತ್ನವನ್ನು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿ.ಕೆ. ಕಾನೂನು ಕಾಲೇಜಿನ ಪ್ರಾಚಾರ್ಯ ಡಾ. ಜ್ಞಾನೇಶ್ವರ ಚೌರಿ, ಕಬಡ್ಡಿ ಪಂದ್ಯಾವಳಿಯ ಯಶಸ್ಸಿನ ಶ್ರೇಯಸ್ಸು ಸಿಬ್ಬಂದಿ ಮತ್ತು ವಿದ್ಯಾಥಿರ್ಗಳಿಗೆ ಸಲ್ಲುತ್ತದೆ ಎಂದರು.
ಚಾಂಪಿಯನ್: ಪಂದ್ಯಾವಳಿಯಲ್ಲಿ ಬೆಂಗಳೂರಿನ ಅಲ್&ಅಮೀನ್ ಕಾನೂನು ಕಾಲೇಜು ತಂಡವು ಚಾಂಪಿಯನ್ಸ್ ಟ್ರೋಫಿ ಪಡೆದುಕೊಂಡಿತು ಮತ್ತು ಕೆಎಲ್ಇ ಸಂಸ್ಥೆಯ ಜಿ.ಕೆ. ಕಾನೂನು ಕಾಲೇಜು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಶಿವಮೊಗ್ಗದ ಸಿಬಿಆರ್ ರಾಷ್ಟ್ರೀಯ ಕಾನೂನು ಕಾಲೇಜು ತೃತೀಯ ಮತ್ತು ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜು ನಾಲ್ಕನೇ ಸ್ಥಾನ ಪಡೆದುಕೊಂಡವು.
ಹುಬ್ಬಳ್ಳಿಯ ಸನ್ನತಕುಮಾರ ಬಿ., ಉತ್ತಮ ದಾಳಿಗಾರ, ಅಂತಿಮ ಪಂದ್ಯದ ಪಂದ್ಯ ಪುರುಷೋತ್ತಮ ಪ್ರಶಸ್ತಿ, ಬೆಂಗಳೂರಿನ ರಾಜೇಶ ಅತ್ಯುತ್ತಮ ಹಿಡಿತಗಾರ ಮತ್ತು ಪುತ್ತೂರಿನ ಶೈಲೇಶ ಶೆಟ್ಟಿ, ಪಂದ್ಯಾವಳಿಯ ಸವೋರ್ತ್ತಮ ಆಟಗಾರ ಪ್ರಶಸ್ತಿ ಪಡೆದುಕೊಂಡರು.
ಶಿವಮೊಗ್ಗದ ಹರ್ಷ ತೃತೀಯ ಮತ್ತು ಚತುರ್ಥ ಪಂದ್ಯಾವಳಿಯ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು. ರಾಜ್ಯದ ವಿವಿಧ ಕಾನೂನು ಕಾಲೇಜುಗಳ 39 ತಂಡಗಳು ಭಾಗವಹಿಸಿದ್ದವು.
ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಎಂ.ಎಂ. ಕುರಗೋಡಿ ಉಪಸ್ಥಿತರಿದ್ದರು.
ಗಣೇಶ ಪ್ರಾರ್ಥನೆ ಹಾಡಿದರು. ಡಾ. ಶಾರದಾ ಪಾಟೀಲ ಪರಿಚಯಿಸಿದರು. ಡಾ. ಎಸ್.ಎಂ. ಹುಲ್ಲೂರ, ರೋಣಿ ಕಾರ್ಯಕ್ರಮ ನಿರೂಪಿಸಿದರು. ಬಾಹುಬಲಿ ಕುರಕುರಿ ವಂದಿಸಿದರು.