

ಶಿವಮೊಗ್ಗ: ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಶಿವಮೊಗ್ಗ ಜಿಲ್ಲಾ ಘಟಕ ನೂತನವಾಗಿ ಅಸ್ತಿತ್ವಕ್ಕೆ ಬಂದಿದೆ. ರಾಜ್ಯ ಸಮಿತಿ ಸೂಚನೆ ಮೇರೆಗೆ ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ರಚಿಸಲಾಗಿದೆ ಎಂದು ಅಮೆಚೂರ್ ಅಸೋಸಿಯೇಷನ್ ಸಬ್ ಕಮಿಟಿ ಸದಸ್ಯ ಎಂ.ಶ್ರೀಕಾಂತ್ ಹೇಳಿದರು.
ನೂತನ ಜಿಲ್ಲಾ ಅಧ್ಯಕ್ಷರಾಗಿ ಬಿ.ಸಿ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿಯಾಗಿ ಅನಿಲ್ ಕುಮಾರ್, ಎಸ್.ಎನ್.ಸಿದ್ದಯ್ಯ(ಖಜಾಂಚಿ), ಕೆ.ಎಸ್.ಶಶಿ, ಎಂ.ವಿನಯ್(ಉಪಾಧ್ಯಕ್ಷ), ಡಿ.ಬಿ.ಲಕ್ಷ್ಮೀನಾರಾಯಣ, ಎಂ.ಜಿ.ಮರುಳಸಿದ್ದ ಸ್ವಾಮಿ (ಸಹ ಕಾರ್ಯದರ್ಶಿ), ಮೈಕೆಲ್ ಕಿರಣ್(ಸಂಘಟನಾ ಕಾರ್ಯದರ್ಶಿ)ಹಾಗೂ ಡಿ.ರಮೇಶ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಬಡ್ಡಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಕಬಡ್ಡಿ ಪಂದ್ಯಾವಳಿಗಳನ್ನು ಏರ್ಪಡಿಸುವುದು, ಪೂರಕವಾದ ತರಬೇತಿ, ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಉತ್ತಮ ತಂಡಗಳನ್ನು ಸಿದ್ಧಪಡಿಸಿ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಕಳುಹಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಶಿವಮೊಗ್ಗದಲ್ಲಿ ಕಬಡ್ಡಿಗೆ ಪೂರಕ ವಾತಾವರಣವಿದೆ. ನಾಲ್ಕು ಮಂದಿ ರಾಷ್ಟ್ರಿಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಬ್ಯಾಂಕ್ ಮತ್ತಿತರ ಕಡೆಗಳಲ್ಲಿ ಕಬಡ್ಡಿ ಆಟಗಾರರಿಗೆ ಕ್ರೀಡಾ ಮೀಸಲಾತಿ ಅನ್ವಯ ಉದ್ಯೋಗ ಸಿಗಲಿದೆ ಎಂದರು. ನೂತನ ಸಮಿತಿ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿದ್ದರು.