

ಕುಶಾಲನಗರ:
ಕೊಡಗು ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆಯಿಂದ ಕುಶಾಲನಗರದ ಜಿಎಂಪಿ ಶಾಲಾ ಮೈದಾನದಲ್ಲಿ ಮೂರು ದಿನಗಳ ಕಾಲ ಈಚೆಗೆ ಹಮ್ಮಿಕೊಂಡಿದ್ದ ಹೊನಲು ಬೆಳಕಿನ ಬಿಜಿಎಸ್ ಕಪ್ ರಾಜ್ಯಮಟ್ಟದ ಕಬ್ಬಡ್ಡಿ ಹಬ್ಬದಲ್ಲಿ ಬೆಂಗಳೂರು ತಂಡ ಪ್ರಥಮ ಸ್ಥಾನ ಗಳಿಸಿತು. ಮೈಸೂರು ದ್ವಿತೀಯ, ಬಾಗಲಕೋಟೆ ತೃತೀಯ ಹಾಗೂ ಬೆಳಗಾವಿ ತಂಡ ನಾಲ್ಕನೇ ಸ್ಥಾನ ಪಡೆಯಿತು.
ಮೂರು ದಿನಗಳ ಕಾಲವೂ ಜನಮನ ರಂಜಿಸಿದ ಈ ಪಂದ್ಯಾವಳಿಯನ್ನು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಯೋಗದೊಂದಿಗೆ ಏರ್ಪಡಿಸಲಾಗಿತ್ತು. ಈ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ರಾಜ್ಯಾದ ವಿವಿಧೆಡೆಯ 30 ತಂಡಗಳು ಪಾಲ್ಗೊಂಡಿದ್ದವು. ಈ ಕಬ್ಬಡ್ಡಿ ಹಬ್ಬದಲ್ಲಿ ಪ್ರೋ ಕಬಡ್ಡಿ ಆಟಗಾರರು ಪಾಲ್ಗೊಂಡಿದ್ದು ವಿಶೇಷ ಜನಾಕರ್ಷಣೆಯಾಗಿತ್ತು.
ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಕಬ್ಬಡ್ಡಿ ಪಂದ್ಯಾವಳಿ ವಿಜೇತರು ಸೇರಿದಂತೆ ಸಮುದಾಯ ಬಾಂಧವರಿಗೆ ಹಮ್ಮಿಕೊಂಡಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಿಗೆ ಇದೇ ಸಂದರ್ಭ ಬಹುಮಾನ ವಿತರಣೆ ಮಾಡಲಾಯಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ ಕಬ್ಬಡ್ಡಿ ಹಬ್ಬದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಮತ್ತಷ್ಟು ವಿಜೃಂಭಣೆಯಿAದ ಮುಂದುವರೆಸುವAತೆ ಶುಭ ಹಾರೈಸಿದರು.
ಆದಿಚುಂಚನಗಿರಿ ಕೊಡಗು ಹಾಸನ ಶಾಖಾ ಮಠದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.
ಸಮಾಜ ಸೇವಕ ಕಿರಗಂದೂರು ಪದ್ಮನಾಭ, ಜಿಪಂ ಮಾಜಿ ಸದಸ್ಯ ವಿ.ಪಿ. ಶಶಿಧರ್, ಬಿ.ಬಿ. ಭಾರತೀಶ್, ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡೂರಾವ್, ಪ್ರೋ ಕಬ್ಬಡ್ಡಿ ತಂಡದ ಕೋಚ್ ಬಿ.ಸಿ. ರಮೇಶ್, ಮೇ. ಧ್ಯಾನ್ ಚಂದ್ ಪ್ರಶಸ್ತಿ ಪುರಸ್ಕೃತ ಕಬ್ಬಡ್ಡಿ ಆಟಗಾರ ಬಿ.ಸಿ. ಸುರೇಶ್, ಅಮೆಚೂರ್ ಕಬ್ಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಉತ್ತಪ್ಪ, ಒಕ್ಕಲಿಗ ಯುವ ವೇದಿಕೆ ತಾಲೂಕು ಅಧ್ಯಕ್ಷ ಜೈರಾಜ್, ಜಿಲ್ಲಾ ಖಜಾಂಚಿ ಚಂದ್ರಶೇಖರ್ ಹೇರೂರು, ಸಂಘಟನಾ ಕಾರ್ಯದರ್ಶಿ ಕಿರಣ್, ಪ್ರಮುಖರಾದ ಸಂತೋಷ್, ಪ್ರೋ ಕಬ್ಬಡ್ಡಿ ಆಟಗಾರ ಅವಿನಾಶ್, ಪ್ರಮುಖರಾದ ಎಂ. ಎಲ್. ಗೌತಮ್, ಸಂತೋಷ್, ಅಭಿಷೇಕ್, ಸುನಿತ್ ಕುಮಾರ್, ಗಿರೀಶ್, ಪ್ರವೀಣ್ ಮತ್ತಿತರರು ಇದ್ದರು.