ಬೀಚ್ ಖೇಲೋ ಇಂಡಿಯಾ ಕಬ್ಬಡ್ಡಿಗೆ ಆಟಗಾರರ ಆಯ್ಕೆ

kabaddi
Published on

ಕುಶಾಲನಗರ:

ಮೇ. 19 ರಿಂದ ಗುಜರಾತ್‌ನಲ್ಲಿ ನಡೆಯಲ್ಲಿರುವ ರಾಷ್ಟ್ರ ಮಟ್ಟದ ಬೀಚ್ ಖೇಲೋ ಇಂಡಿಯಾ ಕಬ್ಬಡ್ಡಿ ಪಂದ್ಯಾಟಕ್ಕಾಗಿ ಕರ್ನಾಟಕ ತಂಡಕ್ಕೆ ಪುರುಷ ಮತ್ತು ಮಹಿಳೆ ಆಟಗಾರರ ಆಯ್ಕೆ ಪ್ರಕ್ರಿಯೆ ಕುಶಾಲನಗರದಲ್ಲಿ ಗುರುವಾರ ನಡೆಯಿತು.

ಬೆಂಗಳೂರಿನ ಕರ್ನಾಟಕ ಅಮೆಚೂರ್ ಕಬ್ಬಡ್ಡಿ ಅಸೋಸಿಯೇಷನ್ ವತಿಯಿಂದ ನಡೆದ ಈ ಆಯ್ಕೆ ಪ್ರಕ್ರಿಯೆಯಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿದ್ದ ಪುರುಷ ಹಾಗೂ ಮಹಿಳಾ ಆಟಗಾರು ಈ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಕುಶಾಲನಗರದ ಜಿ.ಎಂ.ಪಿ. ಶಾಲೆ ಮೈದಾನದಲ್ಲಿ ನಡೆದ ಈ ಪ್ರಕ್ರಿಯೆಯಲ್ಲಿ ಭಾರತ ಕಬ್ಬಡ್ಡಿ ತಂಡದ ಮಾಜಿ ನಾಯಕ, ಅರ್ಜುನ ಪ್ರಶಸ್ತಿ ಪುರಸ್ಕೃತ ಬಿ.ಸಿ. ರಮೇಶ್, ಅಂತರರಾಷ್ಟ್ರೀಯ ಕಬ್ಬಡ್ಡಿ ಆಟಗಾರ, ಕರ್ನಾಟಕ ರಾಜ್ಯ ಅಮೆಚೂರ್ ಕಬ್ಬಡ್ಡಿ ಅಸೋಸಿಯೇಷನ್ ಅಧ್ಯಕ್ಷÀ ಬಿ.ಸಿ. ಸುರೇಶ್, ಅಂತಾರಾಷ್ಟ್ರೀಯ ಕಬ್ಬಡ್ಡಿ ಆಟಗಾರ ಬಿ.ಎಂ. ಮಹೇಶ್, ದೈಹಿಕ ಶಿಕ್ಷಣ ಶಿಕ್ಷಕ ಹೆಚ್.ಎಸ್. ಉತ್ತಪ್ಪ ಪಾಲ್ಗೊಂಡು ಆಟಗಾರರ ಆಯ್ಕೆ ನಡೆಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಬಿ.ಸಿ. ರಮೇಶ್ ಪ್ರೋ ಕಬ್ಬಡ್ಡಿ ತಂಡಕ್ಕೆ ಕೊಡಗಿನಿಂದ ಕೆಲವು ಆಟಗಾರರಿಗೆ ಅವಕಾಶ ನೀಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಆಟಗಾರರನ್ನು ಗುರುತಿಸುವ ಪ್ರಯತ್ನ ಮಾಡಲಾಗುತ್ತದೆ. ಮೇ 19 ರಂದು ಗುಜರಾತ್‌ನಲ್ಲಿ ನಡೆಯಲ್ಲಿರುವ ಬೀಚ್ ಖೇಲೋ ಇಂಡಿಯಾ ಕಬ್ಬಡ್ಡಿ ಕರ್ನಾಟಕ ತಂಡಕ್ಕೆ 85 ಕೆ.ಜಿ.ಪುರುಷರ ವಿಭಾಗಕ್ಕೆ 6 ಆಟಗಾರರನ್ನು ಹಾಗೂ 75 ಕೆ ಜಿ.ಮಹಿಳಾ ವಿಭಾಗಕ್ಕೆ 6 ಆಟಗಾರರನ್ನು ಆಯ್ಕೆ ಮಾಡಲಾಯಿತು ಈ ಆಟಗಾರರು ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net