ದೇವರನ್ನು ಸಮೀಪದಲ್ಲಿ ತೋರಿಸುವುದೇ ವೀರಶೈವ ಧರ್ಮ: ಶ್ರೀ ಕಾಶಿ ಜಗದ್ಗುರು

28GDG09
Published on

ಗದಗ: ದೇವರನ್ನು ಸಮೀಪದಲ್ಲಿ ತೋರಿಸುವ ಧರ್ಮವೇ ವೀರಶೈವ ಧರ್ಮ ಎಂಬ ವಿಚಾರವನ್ನು ಶ್ರೀ ಕಾಶಿ ಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.

ಗದಗ ನಗರದ ಕೆ ಎಚ್ ಪಾಟೀಲ್ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಸಿದ್ಧಾಂತ ಶಿಖಾಮಣಿಯ ಆಧ್ಯಾತ್ಮಿಕ ಆಶೀರ್ವಚನ ವೇದಿಕೆ ಯಿಂದ ಈ ವಿಚಾರವನ್ನು ತಿಳಿಸಿದರು.

ದೇವರು ದೂರಕ್ಕಿಂತಲೂ ದೂರನೂ ಸಮೀಪಕ್ಕಿಂತಲೂ ಸಮೀಪನೂ ಆಗಿರುತ್ತಾನೆ. ಆದರೆ ವೀರಶೈವ ಧರ್ಮದ ಆಚಾರ್ಯರು ಇಷ್ಟ, ಪ್ರಾಣ,ಭಾವಲಿಂಗಗಳನ್ನ ಕರುಣಿಸುವ ಮೂಲಕ ಪ್ರತಿಯೊಬ್ಬ ವ್ಯಕ್ತಿಗೆ ದೇವರನ್ನು ಸಮೀಪದಲ್ಲಿ ತೋರಿಸಿದ್ದಾರೆ. ಹಿತ್ತಲದಲ್ಲಿ ಜೇನು ಸಿಗುತ್ತಿದ್ದರೆ ಅರಣ್ಯಕ್ಕೆ ಹೋಗುವದ್ಯಾಕೆ ಎಂಬ ನ್ಯಾಮದಂತೆ

ಜಗತ್ತಿನ ತುಂಬೆಲ್ಲ ತುಂಬಿರುವ ದೇವರು ನಮ್ಮೆಲ್ಲರ ಆತ್ಮರೂಪನೂ ಆಗಿರುವುದರಿಂದ ಆತನನ್ನು ಆತ್ಮರೂಪದಲ್ಲಿ ಆರಾಧಿಸುವುದೇ ಶ್ರೇಷ್ಠವಾದ ಮಾರ್ಗವು. ಅಂತೆಯೇ ಶ್ರೀ ಸಿದ್ಧಾಂತ ಶಿಖಾಮಣಿಯ ಭಾವಾಚಾರ ಸ್ಥಲದಲ್ಲಿ ದೇವರನ್ನು ಭಾವಲಿಂಗ ರೂಪದಲ್ಲಿ ಪ್ರತಿಪಾದಿಸಿದ್ದಾರೆ. ಮನುಷ್ಯನ ಭಾವನೆಯಲ್ಲಿ ಅಪಾರವಾದ ಸಾಮರ್ಥ್ಯವಿರುತ್ತದೆ. ಎಲ್ಲ ಲೋಕಗಳನ್ನು ತನ್ನೊಳಗೆ ತುಂಬಿಕೊಂಡಿರುವ ಆ ಬೃಹತ್ ಲಿಂಗವನ್ನು ನಮ್ಮ ಭಾವನೆಯು ತನ್ನೊಳಗೆ ಅಳವಡಿಕೊಳ್ಳಬಹುದು . ಆದ್ದರಿಂದ ಪ್ರತಿಯೊಬ್ಬರು ದೂರದ ದೇವರನ್ನು ತನ್ನಲ್ಲೇ ಕಾಣುವ ಸುಲಭ ಮಾರ್ಗವನ್ನು ಅಳವಡಿಕೊಳ್ಳ ಬೇಕೆಂದು ಶ್ರೀ ಸನ್ನಿಧಿಯವರು ಆಶೀರ್ವಚನದಲ್ಲಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net