

ಮೈಸೂರು: ಸೆಕ್ರೆಟರಿ ಜನರಲ್ ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ ಅಧಿಸೂಚನೆಯ ಪ್ರಕಾರ ಕೆ.ಎ.ವಿಲಿಯಂ ಮೈಸೂರಿನ ಬಿಷಪ್ ಹುದ್ದೆಗೆ ರಾಜೀನಾಮೆ ನೀಡಿದ್ದು, ಅದನ್ನು ಪವಿತ್ರ ಪೋಪ್ ಫ್ರಾನ್ಸಿಸ್ ಅಂಗೀಕರಿಸಿದ್ದಾರೆ ಎಂದು ಕ್ಯಾಥೋಲಿಕ್ ಅಸೋಸಿಯೇಶನ್ ಅಧ್ಯಕ್ಷ ಮ್ಯಾಥ್ಯೂ ಬೆಂಜಮಿನ್ ಸುರೇಶ್ ತಿಳಿಸಿದ್ದಾರೆ.
ಚರ್ಚ್ ಒಳಿತಿಗಾಗಿ ವಿಲಿಯಂ ರಾಜೀನಾಮೆ ನೀಡಿದ್ದು, ಹೊಸ ಬಿಷಪ್ ಆಯ್ಕೆ ಆಗಲಿದೆ. ಚರ್ಚಿನ ಹಿತ ಬಯಸುವವರು ಮತ್ತು ಆಡಿಯೋದಲ್ಲಿ ಹೇಳಿರುವಂತೆ ವಿಲಿಯಂ ನಿರಪರಾಧಿ ಎಂದು ಸಾಬೀತಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೆ.ವಿ.ವಿಲಿಯಂ ಅವರು ಇನುಂದೆ ತಮ್ಮ ಸಚಿವಾಲಯದ ಮೇಲೆ ಯಾವುದೇ ಅಂಗೀಕೃತ ನಿರ್ಬಂಧಗಳನ್ನು ಹೊಂದಿರುವುದಿಲ್ಲ. ಈ ನಿಬಂಧನೆಯನ್ನು ರೋಮ್‌ನಲ್ಲಿ ಜ.13ರಂದು ರಂದು ಮಧ್ಯಾಹ್ನ 4.30ಕ್ಕೆ ಅನುರೂಪವಾಗಿ ಸಾರ್ವಜನಿಕಗೊಳಿಸಲಾಗಿದೆ ಎಂದು ತಿಳಿಸಿದರು.
ಕ್ಯಾಥೋಲಿಕ್ ಅಸೋಸಿಯೇಶನ್ ಕಾರ್ಯದರ್ಶಿ ಪ್ರೆಮಾನಂದ್ ಡಿಮೆಲ್ಲೋ ಇದ್ದರು.