ಕೆ.ವಿರೂಪಾಕ್ಷಪ್ಪರಿಂದ ಪಕ್ಷಕ್ಕೆ ಆನೆಬಲ - ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ

Kanakagiri BY Vijayendra Visit
ಕನಕಗಿರಿಯ ಕನಕಾಚಲ ಲಕ್ಷ್ಮಿ ನರಸಿಂಹ ದೇವಸ್ಥಾನಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಶನಿವಾರ ಪೂಜೆ ಸಲ್ಲಿಸಿದರು.
Published on

ಕನಕಗಿರಿ: ಪ್ರತಾಪಗೌಡರ ತ್ಯಾಗದಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಮಸ್ಕಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಮಾವೇಶಕ್ಕೆ ತೆರಳುವ ಮಾರ್ಗಮಧ್ಯೆ ಕನಕಾಚಲ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಹೋರಾಟ ಎಲ್ಲಿರುತ್ತೋ ಅಲ್ಲಿ ಯಡಿಯೂರಪ್ಪ ಇರ್ತಾರೆ. ಅನೇಕ ಸವಾಲು ಗೆದ್ದು ಅವರು ಸಿಎಂ ಆಗಿದ್ದಾರೆ. ರಾಜ್ಯದ ಜನರಿಗೆ ಇದರ ಸ್ಪಷ್ಟತೆ ಇದೆ. ಯಾವುದೇ ಸ್ಥಾನಮಾನ ಬಯಸದೆ, ಯಡಿಯೂರಪ್ಪರ ನಾಯಕತ್ವಕ್ಕೆ ಮೆಚ್ಚಿ ಪಕ್ಷಕ್ಕೆ ಬಂದಿರುವ ಕೆ.ವಿರೂಪಾಕ್ಷಪ್ಪನವರಿಂದ ನಮಗೆ ಆನೆ ಬಲ ಬಂದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net