ಕೆ.ಟಿ.ಗಟ್ಟಿ ಕಾದಂಬರಿಗಳಲ್ಲಿ ಬದುಕಿನ ಸಂಬಂಧಗಳ ಚಿತ್ರಣ - ಪ್ರೊ.ಬಿ.ಶಿವರಾಮ ಶೆಟ್ಟಿ

kkkkkkkkkkk
Published on


ಮಂಗಳೂರು : ಕೆ.ಟಿ.ಗಟ್ಟಿ ಅವರ ಕಾದಂಬರಿಗಳ ಪಾತ್ರಗಳಲ್ಲಿ ಓದುಗರು ತಮ್ಮ ಬಿಂಬವನ್ನೇ ಕಾಣುತ್ತಿದ್ದರು . ಅವರು ಕಾದಂಬರಿಗಳಲ್ಲಿ ನೀಡಿದ ಬಡತನ, ನೋವು ,ಸಂಕಟ ಹಾಗೂ ಬದುಕಿನ ಸಂಬಂಧಗಳ ಚಿತ್ರಣ ಓದುಗರನ್ನು ಆಕರ್ಷಿಸಿತ್ತು ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಶಿವರಾಮ ಶೆಟ್ಟಿ ಅವರು ಹೇಳಿದರು.
ಇತ್ತೀಚೆಗೆ ನಿಧನರಾದ ಕಾದಂಬರಿಕಾರ ಕೆ.ಟಿ.ಗಟ್ಟಿ ಅವರಿಗೆ ತುಳು ಪರಿಷತ್ ವತಿಯಿಂದ ನಗರದ ಮ್ಯಾಪ್ಸ್ ಕಾಲೇಜಿನಲ್ಲಿ ಆಯೋಜಿಸಲಾದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೂಲ್ಕಿ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆ ಅವರು ಮಾತನಾಡಿ ‘ಕೆ.ಡಿ.ಗಟ್ಟಿ ಅವರ ಬರಹಗಳಲ್ಲಿ ಬಡ ಮಧ್ಯಮ ವರ್ಗದ ಜನರ ಬವಣೆ, ಹೆಣ್ಣಿನ ಶೋಷಣೆಗಳನ್ನು ಬಿಂಬಿಸಿದ್ದಾರೆ, ವೈಚಾರಿಕತೆಯ ಮಹತ್ವವನ್ನು ಸಾರಿದ್ದಾರೆ ಎಂದರು.
ಕೆ.ಟಿ.ಗಟ್ಟಿ ಅವರ ಪುತ್ರ ಸತ್ಯಜಿತ್ , ಉಪನ್ಯಾಸಕ ಚೇತನ್ ಸೋಮೇಶ್ವರ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮಮತಾ ಗಟ್ಟಿ, ಸಾಮಾಜಿಕ ಕಾರ್ಯಕರ್ತ ಎಂ.ಜಿ.ಹೆಗ್ಡೆ, ಪತ್ರಕರ್ತ ನಂದಗೋಪಾಲ್, ಲೇಖಕಿಯರಾದ ಉಷಾ ಪಿ ರೈ, ಡಾ.ಮೀನಾಕ್ಷಿ ರಾಮಚಂದ್ರ, ಮೀನಾಕ್ಷಿ ಕಳವಾರು, ಉಪನ್ಯಾಸಕ ಡಾ.ಮಾಧವ ಎಂ.ಕೆ ನುಡಿ ನಮನ ಸಲ್ಲಿಸಿದರು.
ಕೆ.ಟಿ.ಗಟ್ಟಿ ಅವರ ಪತ್ನಿ ಯಶೋಧ, ಪುತ್ರಿಯರಾದ ಚಿತ್‌ಪ್ರಭಾ, ಪ್ರಿಯದರ್ಶಿನಿ , ಡಾ.ಪ್ರಭಾಕರ ನೀರ್ ಮಾರ್ಗ, ಬೆನೆಟ್ ಅಮ್ಮನ್ನ, ಸದಾಶಿವ ಮಾಸ್ಟ್ರು, ಗಣೇಶ್ ಪೂಜಾರಿ, ಶಾಂತಲಾ ಗಟ್ಟಿ ಮುಂತಾದವರು ಉಪಸ್ಥಿತರಿದ್ದರು. ತುಳು ಪರಿಷತ್ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net