ಯಕ್ಷ ಪುರಸ್ಕಾರಕ್ಕೆ ಕೆ.ಸುರೇಂದ್ರ ಶೆಣೈ ಆಯ್ಕೆ...

Surendra
Published on

ಕೆರ್ವಾಶೆಯಲ್ಲಿ 19ರಂದು ಪ್ರಶಸ್ತಿ ಪ್ರದಾನ

ಉಡುಪಿ: ವೃತ್ತಿ ಮೇಳಗಳಲ್ಲಿ ಮತ್ತು ಹವ್ಯಾಸಿ ಸಂಘಗಳಲ್ಲಿ ದೀರ್ಘಕಾಲ ಭಾಗವತರಾಗಿ ಕಲಾ ಸೇವೆಗೈದ ಕೆ.ಸುರೇಂದ್ರ ಶೆಣೈ ಯಕ್ಷ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಉಡುಪಿಯ ದಾನಿ, ಕಲಾಪ್ರೇಮಿಗಳಾದ ಪ್ರಭಾವತಿ ವಿ. ಶೆಣೈ ಹಾಗೂ ಯು.ವಿಶ್ವನಾಥ ಶೆಣೈ ದಂಪತಿ ಪ್ರಾಯೋಜಕತ್ವದ ಪ್ರಶಸ್ತಿ ಇದಾಗಿದೆ.

ಕೆರ್ವಾಶೆಯಲ್ಲಿರುವ ಸ್ವಗೃಹದಲ್ಲಿ ಉಡುಪಿ ಯಕ್ಷಗಾನ ಕಲಾರಂಗದ ವತಿಯಿಂದ ಮಾ.19ರಂದು ಸಂಜೆ 5 ಗಂಟೆಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಯಕ್ಷಗಾನದ ಹಿರಿಯ ವಿದ್ವಾಂಸ ಡಾ. ಎಂ.ಪ್ರಭಾಕರ ಜೋಶಿ, ಎ.ವಿ.ಎಂ. ರಮೇಶ ಕಾರ್ಣಿಕ ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್​, ಕಾರ್ಯದರ್ಶಿ ಮುರಲಿ ಕಡೆಕಾರ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net