ಕೆ ಸ್ಕ್ವೇರ್​​ ಸ್ಮಾರ್ಟ್ ಸಿಟಿ ಕೆಲವೇ ಸೈಟ್ ಬಾಕಿ: 10 ಗ್ರಾಂ ಚಿನ್ನ ಸೇರಿ ಭರ್ಜರಿ ರಿಯಾಯಿತಿ! K Square Smart City

K Square Smart City
Published on

K Square Smart City : ಕೆ ಸ್ಕ್ವೇರ್​​ ಸ್ಮಾರ್ಟ್​ಸಿಟಿ ರಿಯಾಲ್ಟಿ ಸಂಸ್ಥೆಯು (ತಿರುಮಲ ಪ್ರಾಜೆಕ್ಟ್) ಮೈಸೂರು ರಸ್ತೆ ಸಮೀಪದ ರಾಮೋಹಳ್ಳಿಯ ವಿಶಾಲವಾದ ಪ್ರದೇಶದಲ್ಲಿ ಕೈಗೆಟಕುವ ದರದಲ್ಲಿ ಎಲ್ಲ ಸೌಲಭ್ಯಗಳೊಂದಿಗೆ ಆರಂಭಿಸಿದ್ದು, ಕೆಲವೇ ಪ್ರೀಮಿಯಂ ಸೈಟ್​ಗಳು ಉಳಿದುಕೊಂಡಿವೆ.

ಗ್ರಾಹಕರಿಗೆ ಭರ್ಜರಿ ರಿಯಾಯಿತಿ ಮುಂದಿಟ್ಟಿದ್ದು, 10 ಗ್ರಾಂ ಚಿನ್ನ, ಶೇ.100 ಕಾನೂನು ಶುಲ್ಕ ವಿನಾಯಿತಿ ಹಾಗೂ ಶೇ.50 ನೋಂದಣಿ ಮತ್ತು ನಿರ್ವಹಣೆ ಶುಲ್ಕದ ರಿಯಾಯಿತಿ ಪಡೆಯಬಹುದು. ಈ ಆಫರ್ ಆಗಸ್ಟ್ 31ರ ತನಕ ಲಭ್ಯವಿದ್ದು, ಗ್ರಾಹಕರಿಗೆ ಕೆ ಸ್ಕ್ವೇರ್​​ ಸ್ಮಾರ್ಟ್​ಸಿಟಿ ಉತ್ತಮ ಆಯ್ಕೆಯಾಗಲಿದೆ. ಈಗಾಗಲೇ ಸಂಸ್ಥೆಗೆ 3,600 ಸಂತೃಪ್ತ ಗ್ರಾಹಕರಿದ್ದಾರೆ. ರಾಮೋಹಳ್ಳಿಯಲ್ಲಿ ಮಾರುಕಟ್ಟೆ ಬೆಲೆ ಪ್ರತಿ ಚದರ ಅಡಿಗೆ 6,500 ರೂ.ಯಿಂದ ಹಿಡಿದು 10 ಸಾವಿರ ರೂ.ವರೆಗೆ ಇದೆ. ಆದರೆ, ಕೆ ಸ್ಕ್ವೇರ್​ಸ್ಮಾರ್ಟ್​ಸಿಟಿ ಸಂಸ್ಥೆಯ ದರ 4,299 ಆಗಿದ್ದು, ಪ್ರಿ ಲಾಂಚಿಂಗ್ ದಿನದಂದು ಮೊದಲ 25 ಸೈಟ್​ಗಳಿಗೆ 3,999 ರೂ.ಗೆ ನೀಡಲಾಗಿತ್ತು.

Real Estate

ಹೊಸ ಕೆಂಗೇರಿ ವಿಸ್ತರಣೆ: ಹೊಸ ಕೆಂಗೇರಿ ವಿಸ್ತರಣೆಯಲ್ಲಿ ಸರಿಸಾಟಿಯಿಲ್ಲದ ಬೆಲೆಯಲ್ಲಿ ಪ್ರೀಮಿಯಂ ಸೈಟುಗಳು ಲಭ್ಯವಿವೆ. ಬಿಎಂಆರ್​ಡಿ, ರೇರಾ ಅನುಮೋದಿತ ಹೊಂದಿರುವ ಏಳುವರೆ ಎಕರೆ ವಿಶಾಲ ಪ್ರದೇಶದಲ್ಲಿ 121 ನಿವೇಶನ ನಿಮಾಣ ಮಾಡಲಾಗಿದೆ. 2030, 3040, 3050, 4060 ವಿವಿಧ ವಿಸ್ತೀರ್ಣದ ಸೈಟ್​ಗಳು ಲಭ್ಯವಿವೆ. ಗಾರ್ಡನ್ ಪ್ಲಾಟ್​ಗಳು ಇರುವುದು ವಿಶೇಷ. ಈ ಪ್ರಾಜೆಕ್ಟ್ ಸಮೀಪದಲ್ಲಿಯೇ 2,800 ಎಕರೆಯ ಬಿಡಿಎ ನಾಡಪ್ರಭು ಕೆಂಪೇಗೌಡ ಲೇಔಟ್ ನಿಮಾಣವಾಗುತ್ತಿದೆ. ಹೀಗಾಗಿ ರಾಮೋಹಳ್ಳಿ ಸುತ್ತಮುತ್ತಲಿನ ನಿವೇಶನಗಳಿಗೆ ಚಿನ್ನದ ಬೆಲೆ ಇದೆ.

ಸಂಪರ್ಕ ಸುಲಭ: ಈ ಪ್ರಾಜೆಕ್ಟ್ ಸಮೀಪದಲ್ಲೇ ಏಷ್ಯಾದ ಎತ್ತರದ ಸ್ಕೈಡೆಕ್ ಯೋಜನೆ ಸಾಕಾರಗೊಳ್ಳಲಿದ್ದು, ಚಲ್ಲಘಟ್ಟ ಮೆಟ್ರೋ ನಿಲ್ದಾಣ ಸಮೀಪದಲ್ಲಿದೆ. ಬಿಎಂಟಿಸಿ, ರೈಲು ಸೇರಿ ಉತ್ತಮ ಸಾರಿಗೆ ಸಂಪರ್ಕವಿದೆ. ರಾಮೋಹಳ್ಳಿ ಸುತ್ತಮುತ್ತ ಕೆರೆಗಳು ಇರುವುದರಿಂದ ನೀರಿನ ಸಮಸ್ಯೆ ಇಲ್ಲ. ಎಲೆಕ್ಟ್ರಿಕ್ ಅಂಡರ್​ಗ್ರೌಂಡ್ ಕೇಬಲ್ ವ್ಯವಸ್ಥೆ ಈ ಪ್ರಾಜೆಕ್ಟ್​ನ ಮತ್ತೊಂದು ವಿಶೇಷ. ಪ್ರತ್ಯೇಕ ನೀರಿನ ಸಂಪರ್ಕ, ಉತ್ತಮ ಗುಣಮಟ್ಟ ವಸ್ತುಗಳನ್ನು ನಿಮಾಣ ಕಾರ್ಯಕ್ಕೆ ಬಳಸಲಾಗಿದೆ. ಪ್ರತಿಯೊಂದು ನಿವೇಶನಕ್ಕೂ ಪ್ರತ್ಯೇಕ ಆಗಮನ ನಿರ್ಗಮನದ ವ್ಯವಸ್ಥೆ ಮಾಡಲಾಗಿದೆ.

ಪಾಲುದಾರಿಕೆಯ ಸಂಸ್ಥೆಗಳು

ಕೆ ಸ್ಕ್ವೇರ್ ಮತ್ತು ಸ್ಮಾರ್ಟ್​ಸಿಟಿ ಸಂಸ್ಥೆಗಳ ಮಹತ್ವದ ಪ್ರಾಜೆಕ್ಟ್​ಗಳು ಇದಾಗಿದೆ. ಈ ಹಿಂದೆ ಈ ಸಂಸ್ಥೆಯು ತಿರುಮಲ ಪ್ರಾಜೆಕ್ಟ್ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಇದೀಗ ಕೆ ಸ್ಕ್ವೇರ್​ ಸ್ಮಾರ್ಟ್​ಸಿಟಿ ಹೆಸರಿನಲ್ಲಿ ಕಾರ್ಯನಿರ್ವ ಹಿಸುತ್ತಿದೆ. ಎಚ್. ಕೃಷ್ಣಮೂರ್ತಿ ಮತ್ತು ಎನ್. ಸುಬ್ರಮಣಿ ಕೆ ಸ್ಕ್ವೇರ್ ಸಂಸ್ಥೆಯ ಸಂಸ್ಥಾಪಕರು. ಸ್ಮಾರ್ಟ್​ಸಿಟಿಯ ಸಂಸ್ಥಾಪಕರು ಸುನೀಲ್ ಸಿ.ಎಸ್.

ಸಾಲ ಸೌಲಭ್ಯ

ಪ್ರೀಮಿಯಂ ಸೈಟುಗಳು 900 ಅಡಿಯಿಂದ ಲಭ್ಯವಿದೆ. ಅಲ್ಲದೆ 1,200, 1,500, 2,400, 3,000 ಅಡಿಯ ಸೈಟ್​ಗಳು ಲಭ್ಯವಿವೆ. ಬಿಎಂಆರ್​ಡಿ ಮತ್ತು ರೇರಾ ಅನುಮೋದಿತ ಪ್ರಾಜೆಕ್ಟ್ ಇದಾಗಿರುವುದರಿಂದ ರಾಷ್ಟಿ್ರಯ ಬ್ಯಾಂಕ್​ನಿಂದ ಹಿಡಿದು ಎಲ್ಲ ಬ್ಯಾಂಕ್​ಗಳಲ್ಲಿ ಲೋನ್​ಗಳು ಯಾವುದೇ ಕಿರಿಕಿರಿ ಇಲ್ಲದೇ ಸಿಗುತ್ತದೆ. ಬ್ಯಾಂಕಿನಿಂದ ಸಾಲ ಸೌಲಭ್ಯ ಇರುವುದರಿಂದ ಗ್ರಾಹಕರು ತಡಮಾಡದೆ ಬುಕಿಂಗ್ ಮಾಡಬಹುದಾಗಿದೆ.

ವಿಳಾಸ: ಮೈಸೂರು ರಸ್ತೆ, ರಾಮೋಹಳ್ಳಿ. ಸಂಪರ್ಕ ಸಂಖ್ಯೆ: 9019724459

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net