

ಕಿಕ್ಕೇರಿ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಾಲಗಾರರಲ್ಲದ ಕ್ಷೇತ್ರದಿಂದ ನಿರ್ದೇಶಕರಾಗಿ ಅವಿರೋಧವಾಗಿ ಕೆ.ಎಸ್.ಶಿವರಾಮಯ್ಯ ಸೋಮವಾರ ಆಯ್ಕೆಯಾದರು.
ಜ.12ರಂದು 12 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ. ಸಾಲಗಾರರ ಕ್ಷೇತ್ರಕ್ಕೆ 11ನಿರ್ದೇಶಕರು, ಸಾಲಗಾರರಲ್ಲದ ಕ್ಷೇತ್ರಕ್ಕೆ ಒಬ್ಬರು ನಿರ್ದೇಶಕರು ಆಯ್ಕೆಯಾಗಬೇಕಿತ್ತು. ಸಾಲಗಾರರ ಕ್ಷೇತ್ರದಿಂದ 11ಸ್ಥಾನಕ್ಕೆ 23 ಸದಸ್ಯರು ಹಾಗೂ ಸಾಲಗಾರರಲ್ಲದ ಒಂದು ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಸೋಮವಾರ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿತ್ತು.
ಸಾಲಗಾರರಲ್ಲದ ಕ್ಷೇತ್ರಕ್ಕೆ ಕೆ.ಎಸ್.ಶಿವರಾಮಯ್ಯ, ಗಜೇಂದ್ರ, ಮಂಜೇಗೌಡ ನಾಮಪತ್ರ ಸಲ್ಲಿಸಿದ್ದರು. ಗಜೇಂದ್ರ, ಮಂಜೇಗೌಡ ನಾಮಪತ್ರ ಹಿಂಪಡೆದ ಕಾರಣ ಕೆ.ಎಸ್.ಶಿವರಾಮಯ್ಯ ಅವಿರೋಧವಾಗಿ ಆಯ್ಕೆಯಾದರು.
ಸಾಲಗಾರ ಕ್ಷೇತ್ರದಲ್ಲಿ 3,182 ಮತದಾರರು, ಸಾಲಗಾರರಲ್ಲದ ಕ್ಷೇತ್ರದಲ್ಲಿ 750 ಮತದಾರರು ಇದ್ದಾರೆ.
ಚುನಾವಣಾಧಿಕಾರಿಯಾಗಿ ಕೆ.ಆರ್.ಪೇಟೆ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಎಚ್.ಬಿ.ಭರತಕುಮಾರ್, ಸಹಾಯಕ ಚುನಾವಣಾಧಿಕಾರಿಯಾಗಿ ಸಿಇಒ ಕೆ.ಆರ್.ಪುಟ್ಟರಾಜು ಕಾರ್ಯ ನಿರ್ವಹಿಸಿದರು.