ಡಿಸೆಂಬರ್‌ ಅಂತ್ಯದೊಳಗೆ ದುರ್ಗೋತ್ಸವ ಖಚಿತ: ನವೀನ್

CTD 25 K.S.NAVIN888
Published on
ಚಿತ್ರದುರ್ಗ: ಐತಿಹಾಸಿಕ ಕೋಟೆನಾಡಿನ ಗತವೈಭವ ಸಾರಲು ಡಿಸೆಂಬರ್‌ ಅಂತ್ಯದೊಳಗೆ 3ರಿಂದ 5 ದಿನ ದುರ್ಗೋತ್ಸವ ಕಾರ್ಯಕ್ರಮ ನಡೆಯುವುದು ಖಚಿತ ಎಂದು ವಿಧಾನಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌ ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಸೋಮವಾರ ಮಾತನಾಡಿದ ಅವರು, ಈ ಸಂಬಂಧ ಸಚಿವರ ಜತೆ ಚರ್ಚಿಸಿದ್ದು, ಸಮ್ಮತಿಸಿದ್ದಾರೆ. ಅ. 28ರಂದು ಕೋಟೆ ಆವರಣದೊಳಗೆ ಪೂರ್ವಭಾವಿಯಾಗಿ ಕಾರ್ಯಕ್ರಮವೊಂದು ನಡೆಯಲಿದೆ. ದುರ್ಗೋತ್ಸವಕ್ಕೆ ಕೇಂದ್ರ ಪ್ರವಾಸೋದ್ಯಮ ಸಚಿವರನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು.

ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರವಿದ್ದಾಗ ದುರ್ಗೋತ್ಸವ ನಡೆದಿತ್ತು. ಈ ಬಾರಿ ಬಿಜೆಪಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಭದ್ರಾ ಮೇಲ್ದಂಡೆ ಯೋಜನೆ, ನೇರ ರೈಲು ಮಾರ್ಗ, 83 ವರ್ಷಗಳ ಬಳಿಕ ತುಂಬಿರುವ ವಾಣಿವಿಲಾಸ ಸಾಗರ ಜಲಾಶಯ ಮತ್ತು ಜಿಲ್ಲೆಯ ಸಮಸ್ಯೆಗಳ ಕುರಿತು ಚರ್ಚೆ, ಸಂವಾದಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net