ಈಶ್ವರಪ್ಪ ಸಂಧಾನ ಯಶಸ್ವಿ, ಎಂಪಿ ಸಂಗಣ್ಣ ನಿರಶನ ಅಂತ್ಯ

k-s-iswarappa-mp-sanganna-karadi-minister-tangadagi-protest-ipset-former
Published on

ಕೊಪ್ಪಳ: ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಸಂಧಾನ ಯತ್ನ ಫಲವಾಗಿ ಸಂಸದ ಸಂಗಣ್ಣ ಕರಡಿ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದರು.

ಮಂಗಳವಾರ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ ಸಚಿವರಾದ ಕೃಷ್ಣ ಬೈರೇಗೌಡ, ಶಿವರಾಜ ತಂಗಡಗಿ ಮುಖ್ಯಮಂತ್ರಿ ಹಾಗೂ ಇಂಧನ ಸಚಿವರಿಗೆ ದೂರವಾಣಿ ಮೂಲಕ ಮಾತನಾಡಿದರು.

ನ.9 ರಂದು ಸಚಿವ ಸಂಪುಟ ಸಭೆ ಇದ್ದು ಅಂದು ಸರ್ಕಾರದ ನಿರ್ಧಾರ ತಿಳಿಸುವುದಾಗಿ ಸಚಿವ ತಂಗಡಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಸೋಲಾರ್ ವ್ಯವಸ್ಥೆ ಬರುವವರೆಗೂ ಹಳೆ ಆದೇಶದಂತೆ ಸರ್ಕಾರ ಸೌಲಭ್ಯ ನೀಡಬೇಕು. ಸರ್ಕಾರ ಭರವಸೆ ನೀಡಿದೆ. ಉಪವಾಸ ಇಲ್ಲಿಗೆ ನಿಲ್ಲಿಸಿ ಎಂದು ಸಂಗಣ್ಣಗೆ ಒತ್ತಾಯಿಸಿದರು.

ನ.9 ರಂದು ಸಚಿವ ಸಂಪುಟ ಸಭೆ ನಿರ್ಣಯಕ್ಕೆ ಕಾಯೋಣ. ಮಾತು ಕೊಟ್ಟಂತೆ ಬದಲಿಸದಿದ್ದಲ್ಲಿ ಹೋರಾಟ ರೂಪಿಸುವುದಾಗಿ ತಿಳಿಸಿದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ಹಳೆ ಆದೇಶ ಮುಂದುವರಸಬೇಕು. ಭರವಸೆ ಕೊಟ್ಟಂತೆ ನೂತನ ಆದೇಶ ಮಾಡಬೇಕು. ಸದ್ಯ ಇರುವ ಅಕ್ರಮ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಬೇಕು.

ಇಲ್ಲದಿದ್ದಲ್ಲಿ ವಚನ ಭ್ರಷ್ಟರಾಗಲಿದ್ದಾರೆ‌ ಎಂದು ಸಚಿವರಿಗೆ ಎಚ್ಚರಿಸಿದರು. ಆದೇಶ ಬರದಿದ್ದಲ್ಲಿ ಹೋರಾಟ ಮುಂದುವರಿಸುವುದಾಗಿ ತಿಳಿಸಿ, ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸುವುದಾಗಿ ಘೋಷಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net