

ಶಿವಮೊಗ್ಗ: ರಾಜ್ಯದಲ್ಲಿ ಇರೋದು ಒಂದೇ ಸಿಎಂ ಸ್ಥಾನ, ಒಬ್ಬರಿಗಿಂತ ಹೆಚ್ಚು ಮಂದಿಯನ್ನು ಮುಖ್ಯಮಂತ್ರಿ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.ಮುಂದಿನ ದಿನಗಳಲ್ಲಿ ನಾವೇ ಅಧಿಕಾರ ಹಿಡಿಯುತ್ತೇವೆ, ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಇರುವುದು ಒಂದೇ, ಮುಖ್ಯಮಂತ್ರಿ ಆಗುವುದು ಬಿಜೆಪಿಯವರು ಮಾತ್ರ, ನಾನು ಸಿ.ಎಂ. ಸ್ಥಾನದ ಆಕಾಂಕ್ಷಿಯಲ್ಲ ಎಂದರು.
ಬಿಜೆಪಿಯವರಿಗೆ ಬೇರೆ ಪಕ್ಷದವರು ಅಧಿಕಾರದಲ್ಲಿ ಇರುವುದು ಇಷ್ಟವಿಲ್ಲ ಹಾಗೂ ಮುಂದಿನ ದಿನಗಳಲ್ಲಿ ನಾನು ಮುಖ್ಯಮಂತ್ರಿ ಆಗಲು ಪ್ರಯತ್ನ ಪಡುತ್ತೇನೆ ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಮನೆ ಮಕ್ಕಳನ್ನು ಸರಿಯಾಗಿ ಇಟ್ಟುಕೊಂಡರೆ ಅವರು ಏಕೆ ಬೇರೆ ಮನೆಗೆ ಹೋಗ್ತಾರೆ. ನಿಮ್ಮ ಶಾಸಕರನ್ನು ಶಿಸ್ತುಬದ್ದವಾಗಿ ಇಟ್ಟುಕೊಳ್ಳಿ.ಮಹಾರಾಷ್ಟ್ರದ ಶಾಸಕರು ಮೊದಲು ಸಿಎಂ ಭೇಟಿ ಆಗುವುದೇ ಕಷ್ಟ ಇತ್ತು.ಈಗ ಸರಿಪಡಿಸಿಕೊಳ್ಳುತ್ತೇವೆ ಅಂತಾ ಹೇಳಿದ್ದಾರೆ ಎಂದು ಮಹರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಕುರಿತು ಮಾತನಾಡಿದರು.ನಾವಾಗಿಯೇ ಪಕ್ಷಕ್ಕೆ ಯಾರನ್ನು ಕರೆದುಕೊಳ್ಳುವುದಿಲ್ಲ, ಅವರಾಗಿಯೇ ಬಂದ್ರೆ ಸೇರಿಸಿಕೊಳ್ಳದೇ ಬಿಡುವುದಿಲ್ಲ.ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷ ಎಂಬುದು ಇರಬೇಕು.ಆದರೆ ವಿಪಕ್ಷ ಸ್ಥಾನವು ಅವರಿಗೆ ದೊರೆಯುತ್ತಿಲ್ಲ.
ಆರ್ಎಸ್ಎಸ್ ಅನ್ನು ಬೈಯದಿದ್ದರೆ ಅವರಿಗೆ ತಿಂದ ಅನ್ನ ಜೀರ್ಣವಾಗುವುದಿಲ್ಲ, ಮೊದಲು ಸಿದ್ದರಾಮಯ್ಯ ಬೈಯುತ್ತಿದ್ದರು, ಈಗ ಕುಮಾರಸ್ವಾಮಿ ಅವರಿಗೂ ಆ ಚಾಳಿ ಬಂದಿದೆ.ಆರ್ಎಸ್ಎಸ್ ಟೀಕಿಸಿದರೆ ಮುಸ್ಲಾನರ ಓಟು ಬರುತ್ತದೆ ಅಂದುಕೊಂಡಿದ್ದಾರೆ. ನೀವು ಮುಸಲ್ಮಾನರ ಓಟು ತೆಗೆದುಕೊಳ್ಳಿ ಬೇಡ ಎನ್ನುವುದಿಲ್ಲ, ಹಿಂದೆಯೂ ನಾನು ಅವರ ಓಟು ಕೇಳಿಲ್ಲ, ಆದರೂ 60 ಮುಸಲ್ಮಾನರ ಬೂತ್ ನಲ್ಲಿ ನನಗೆ ಮೂರುವರೆ ಸಾವಿರ ಓಟು ಬಂದಿದೆ,ಮುಸಲ್ಮಾನರು ಕೂಡ ಕ್ರಮೇಣವಾಗಿ ಬದಲಾಗುತ್ತಿದ್ದಾರೆ. ಅವರಿಗೆ ನಮ್ಮ ಮೇಲೆ ನಂಬಿಕೆ ಬಂದಿದೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)