

ಮೈಸೂರು: ಕೆ.ಎಸ್.ಅರುಣಕುಮಾರಿ ಅವರು ರಾಜ್ಯಶಾಸ್ತ್ರ ವಿಷಯದಲ್ಲಿ ಸಾದರಪಡಿಸಿದ ‘ಸಂಸದೀಯ ಪ್ರಜಾಪ್ರಭುತ್ವದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಪಾತ್ರ ಮತ್ತು ಕಾರ್ಯಾಚರಣೆ 2010 ರಿಂದ 2020-ಒಂದು ಅಧ್ಯಯನ’ ಮಹಾಪ್ರಬಂಧವನ್ನು ಮೈಸೂರು ವಿಶ್ವವಿದ್ಯಾಲಯ ಪಿಎಚ್.ಡಿ ಪದವಿಗಾಗಿ ಅಂಗೀಕರಿಸಿದೆ.
ಇವರಿಗೆ ಡಾ.ಆರ್.ಎನ್. ದಿನೇಶ್ ಅವರು ಮಾರ್ಗದರ್ಶಕರಾಗಿದ್ದರು ಎಂದು ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಪಿ. ಜ್ಞಾನಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.