ಜವಾಬ್ದಾರಿ ಪೂರ್ಣಗೊಳಿಸುವವರೆಗೆ ರಾಜಕೀಯದಲ್ಲಿ ಇರುತ್ತೇನೆ

KR_Ramesh_Kumar_Assembly_750x500_prajavyani_fb_0
Published on

ಕೋಲಾರ: ನಾನು ಜನರಿಗಾಗಿ ವಾಡುವ ಕೆಲಸ ಸಾಕಷ್ಟು ಇದೆ, ನನ್ನ ಜವಾಬ್ದಾರಿ ಪೂರ್ಣಗೊಳಿಸುವವರೆಗೆ ರಾಜಕೀಯದಲ್ಲಿ ಇರುತ್ತೇನೆ ಎಂದು ಶಾಸಕ ಕೆ.ಆರ್.ರಮೇಶ್‌ಕುವಾರ್ ರಾಜಕೀಯ ನಿವೃತ್ತಿ ಬಗ್ಗೆ ಹಬ್ಬಿರುವ ವದಂತಿಗೆ ಸ್ಪಷ್ಟನೆ ನೀಡಿದ್ದಾರೆ.

ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಜನ್ನಟ್ಟದಲ್ಲಿ ಮಂಗಳವಾರ ಹೋಳೂರು ಹೋಬಳಿಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಸುದ್ದಿಗಾರರೊಂದಿಗೆ ವಾತನಾಡಿ, ನನ್ನ ವಿಚಾರವಾಗಿ ಬರೆಯುವಾಗ ಎಚ್ಚರವಹಿಸಬೇಕು ಎಂದು ಪತ್ರಕರ್ತರಿಗೆ ಸೂಚ್ಯವಾಗಿ ಹೇಳಿದರು.

ನಾನು ಸುದ್ದಿಗೋಷ್ಠಿ ಕರೆದು ರಾಜಕೀಯ ನಿವೃತ್ತಿ ೋಷಣೆ ವಾಡಿಲ್ಲ, ಯಾವ ಸಭೆಯಲ್ಲೂ ಅಧಿಕೃತವಾಗಿ ಹೇಳಿಲ್ಲ, ಆದರೂ ನಿವೃತ್ತಿ ಎಂದು ಪ್ರಕಟಿಸಿರುವುದರಿಂದ ಬೆಂಗಳೂರು, ಬೆಳಗಾವಿ, ವಿಜಯಪುರ ಸೇರಿ ರಾಜ್ಯದ ವಿವಿಧ ಕಡೆಗಳಿಂದ ಸ್ನೇಹಿತರು, ಹಿತೈಷಿಗಳು ಕರೆ ಮಾಡಿ ಹೀಗೇಕೆ ನಿರ್ಧಾರ ಬ್ರದರ್ ಎಂದು ಕೇಳಿದರು, ಇವರ ಪ್ರಶ್ನೆಗಳಿಗೆ ಉತ್ತರಿಸಲು ನನಗೆ ಕಷ್ಟವಾಯಿತು ಎಂದರು.

21ನೇ ವಯಸ್ಸಿನಲ್ಲೇ ನಾನು ಚುನಾವಣೆಗೆ ನಿಂತಿದ್ದೆ, ವಾಜಿ ಪ್ರಧಾನಿ ಇಂದಿರಾಗಾಂಧಿ ಬೆಳಗಾವಿಗೆ ಬಂದಿದ್ದಾಗ ಅವರ ಹಿಂದಿ ಭಾಷಣವನ್ನು ಕನ್ನಡಕ್ಕೆ ತರ್ಜುಮೆ ವಾಡಿ ಭೇಷ್ ಅನಿಸಿಕೊಂಡಿರುವೆ. ಕಳೆದ 40 ವರ್ಷಗಳಲ್ಲಿ ರಾಜಕೀಯವಾಗಿ ಅನೇಕ ತೀರ್ವಾನ ತೆಗೆದುಕೊಂಡಿದ್ದು, ಎಂದಿಗೂ ನಾನೊಬ್ಬನೇ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ,. ಒಂದು ವೇಳೆ ನಿವೃತ್ತಿ ೋಷಣೆ ವಾಡುವ ಪರಿಸ್ಥಿತಿ ಎದುರಾದರೆ ನನ್ನ ಜನರ ಅಭಿಪ್ರಾಯ ಮತ್ತು ಸಲಹೆ ಕೇಳಿಯೇ ಅಂತಿಮ ತೀರ್ವಾನ ತೆಗೆದುಕೊಳ್ಳುವೆ ಎಂದು ನಿವೃತ್ತಿ ಪ್ರಸಂಗಕ್ಕೆ ತೆರೆ ಎಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net