ದ್ವಿತೀಯ ಪಿಯುಸಿಯಲ್ಲಿ ಎಂಎವಿಎಎಸ್ ಗುರುಕುಲ ಕಾಲೇಜಿನ ವಿದ್ಯಾರ್ಥಿ ಕೆ.ನಿರ್ಮಿತ್ ಗೆ 556 ಅಂಕ

1
Published on

ಮೈಸೂರು: ನಗರದ ಎಂಎವಿಎಎಸ್ ಗುರುಕುಲ ಕಾಲೇಜಿನ ವಿದ್ಯಾರ್ಥಿ, ವಿಜಯವಾಣಿ ವಿದ್ಯಾರ್ಥಿ ಮಿತ್ರ ಓದುಗ ವಿದ್ಯಾರ್ಥಿ ಕೆ.ನಿರ್ಮಿತ್ ದ್ವಿತೀಯ ಪಿಯು ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಶೇ.93 ಅಂಕಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಕನ್ನಡ 100, ಇಂಗ್ಲಿಷ್ 90, ಭೌತಶಾಸ್ತ್ರ 94, ರಸಾಯನಶಾಸ್ತ್ರ 90, ಗಣಿತ 88, ಜೀವಶಾಸ್ತ್ರ 94 ಸೇರಿದಂತೆ ಒಟ್ಟು 556 ಅಂಕ ಗಳಿಸಿದ್ದಾರೆ. ಈತ ಟಿ.ಕೆ.ಬಡಾವಣೆಯ ಶಿವಕುಮಾರ್, ರಜಿನಿ ದಂಪತಿಯ ಪುತ್ರ.

‘ನಾನು ಅತ್ಯುನ್ನತ ಶ್ರೇಣೆಯಲ್ಲಿ ತೇರ್ಗಡೆಯಾಗಿರುವುದಕ್ಕೆ ಖುಷಿಯಾಗಿದೆ. ತರಗತಿಯ ಪಾಠ, ಟ್ಯೂಷನ್ ಜತೆಗೆ ವಿಜಯವಾಣಿಯ ವಿದ್ಯಾರ್ಥಿ ಮಿತ್ರ ಓದಿದ್ದು ಅನುಕೂಲವಾಯಿತು. ಎಸ್ಸೆಸ್ಸೆಲ್ಸಿಯಿಂದಲೂ ವಿಜಯವಾಣಿಯ ವಿದ್ಯಾರ್ಥಿ ಮಿತ್ರ ಓದುತ್ತಿದ್ದೇನೆ. ಅಲ್ಲಿನ ಟಿಪ್ಸ್‌ಗಳು, ಸಾಧಕರ ಸಂದರ್ಶನಗಳು ಓದಲು ಸ್ಪೋರ್ತಿ ನೀಡಿದವು. ಅದರಿಂದ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಲು ನೆರವಾಯಿತು. ನಾನು ಎಲ್ಲ ವಿಷಯದಲ್ಲಿ ಹೆಚ್ಚು ಅಂಕಗಳಿಸಲು ವಿದ್ಯಾರ್ಥಿ ಮಿತ್ರವೂ ಪ್ರಮುಖ ಕಾರಣ. ತಮ್ಮ ತಂದೆ ಮತ್ತು ತಾಯಿ ಶ್ರಮವೂ ಇದೆ. ಮುಂದೆ ಬಿಎಸ್ಸಿ ಎಜಿ( ಬ್ಯಾಚುಲರ್ ಆಫ್ ಸೈನ್ಸ್ ಇನ್ ಅಗ್ರಿಕಲ್ಚರ್) ಅಥವಾ ವೈದ್ಯಕೀಯ ಶಿಕ್ಷಣ ಪಡೆಯಬೇಕು ಎಂಬ ಆಸೆ ಇದೆ ಎಂದು ನಿರ್ಮಿತ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net