

ತಿ.ನರಸೀಪುರ: ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಯುವ ಘಟಕಕ್ಕೆ ನೂತನ ಅಧ್ಯಕ್ಷರನ್ನಾಗಿ ತಾಲೂಕಿನ ಕೈಯಂಬಳ್ಳಿ ಗ್ರಾಮದ ಕೆ.ಎನ್.ಅಶೋಕ್ ಹಾಗೂ ಮಹಿಳಾ ಘಟಕಕ್ಕೆ ಅಧ್ಯಕ್ಷೆಯಾಗಿ ಪುರಸಭೆ ಸದಸ್ಯೆ ರೂಪಶ್ರೀ ಪರಮೇಶ್ ಅವರನ್ನು ಆಯ್ಕೆ ಮಾಡಲಾಗಿದೆ
ಪಟ್ಟಣದ ವಿವೇಕಾನಂದ ನಗರದಲ್ಲಿರುವ ವೀರಶೈವ ವಿದ್ಯಾರ್ಥಿಯ ನಿಲಯದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ವಿವಿಧ ಘಟಕಗಳ ಪದಾಧಿಕಾರಿಗಳ ಆಯ್ಕೆಯ ಸಭೆಯಲ್ಲಿ ಯುವ ಘಟಕಕ್ಕೆ ಕೆ.ಎನ್.ಅಶೋಕ್ ಹಾಗೂ ಮಹಿಳಾ ಘಟಕಕ್ಕೆ ರೂಪಶ್ರೀ ಪರಮೇಶ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಮಹಾಸಭಾ ಅಧ್ಯಕ್ಷ ಸಿ.ಎಂ.ಪ್ರಕಾಶ್, ತಾಲೂಕಿನಲ್ಲಿ ವೀರಶೈವ-ಲಿಂಗಾಯತ ಸಮಾಜದ ಸರಸತ್ವ ಅಭಿಯಾನಕ್ಕೆ ಒತ್ತು ನೀಡಿ, ಸಮುದಾಯ ಪರವಾದ ಕಾರ್ಯಕ್ರಮಗಳಿಗೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಮಹಾಸಭಾ ಉಪಾಧ್ಯಕ್ಷರಾದ ಅಂಬಿಕಾ ಲೋಕೇಶ್, ಎಸ್.ಕೆ. ಕಿರಣ್, ಬಿ.ಎಂ.ಶಿವಮಲ್ಲಪ್ಪ, ಪ್ರಧಾನ ಕಾರ್ಯದರ್ಶಿ ಕೆ.ವಿ.ಶಿವಶಂಕರ್, ಕಾರ್ಯದರ್ಶಿ ಪರಮೇಶ್ ಪಟೇಲ್, ಕೋಶಾಧ್ಯಕ್ಷ ದೊಡ್ಡನಹುಂಡಿ ಜಿ.ನಂಜುಂಡಸ್ವಾಮಿ, ನಿಕಟಪೂರ್ವ ನಿರ್ದೇಶಕ ಕೆಬ್ಬೆಹುಂಡಿ ಶಿವಕುಮಾರ್, ಆಡಿಟರ್ ಮಂಜುನಾಥ್ ಹಾಗೂ ಇತರರು ಇದ್ದರು.