ಕೆ.ಕುಞಿಕಣ್ಣನ್ ಸಂಸ್ಮರಣೆ, ಭಾವಚಿತ್ರ ಅನಾವರಣ

New Project (39)
Published on

ಕಾಸರಗೋಡು: ಎನ್‌ಜಿಒ ಸಂಘದ ಮಾಜಿ ಜಿಲ್ಲಾಧ್ಯಕ್ಷ, ಭಾರತೀಯ ರಾಜ್ಯ ಪಿಂಚಣಿದಾರರ ಮಹಾ ಸಂಘದ ಜಿಲ್ಲಾ ಕೋಶಾಧಿಕಾರಿ ಕೆ.ಕುಞಿಕಣ್ಣನ್ ಪ್ರಥಮ ಸಂಸ್ಮರಣಾ ಕಾರ್ಯಕ್ರಮ ಕಾಸರಗೋಡು ಕರಂದಕ್ಕಾಡಿನ ಕರ್ಮಚಾರಿ ಸಮಿತಿ ಕಚೇರಿಯಲ್ಲಿ ಜರುಗಿತು.

ಪುಣ್ಯತಿಥಿ ಅಂಗವಾಗಿ ಕುಞಿಕಣ್ಣನ್ ಅವರ ಛಾಯಾಚಿತ್ರ ಅನಾವರಣ, ಪುಷ್ಪನಮನ ಮತ್ತು ಸಂಸ್ಮರಣಾ ಕಾರ್ಯಕ್ರಮ ಜರುಗಿತು. ಬಿಆರ್‌ಪಿಎಂಎಸ್ ರಾಷ್ಟ್ರೀಯ ಅಧ್ಯಕ್ಷ ಸಿ.ಎಚ್.ಸುರೇಶ್ ಛಾಯಾಚಿತ್ರ ಅನಾವರಣಗೊಳಿಸಿದರು. ಬಿಆರ್‌ಪಿಎಂ.ಎಸ್. ಕಾಸರಗೋಡು ಘಟಕ ರಕ್ಷಾಧಿಕಾರಿ ಎಂ.ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು.

ಧೀವರ ಸಭಾ ಜಿಲ್ಲಾಧ್ಯಕ್ಷ ಕೆ.ಸುರೇಶ್ ಕುಮಾರ್, ಜಿಲ್ಲಾ ರಕ್ಷಾಧಿಕಾರಿ ಕೊಂಡೋಟ್ಟಿ ಮಾಧವನ್, ಜಿಲ್ಲಾ ಧರ್ಮಾಚಾರ್ಯ ಸಂಪರ್ಕ ವ್ಯಕ್ತಿ ಎ.ಟಿ.ನಾಯಕ್, ಹಿಂದು ಐಕ್ಯ ವೇದಿಕೆ ಜಿಲ್ಲಾ ಪೋಷಕ ಕೊಟ್ಟೋಡಿ ಗೋವಿಂದನ್ ಮಾಸ್ಟರ್, ಕೆ.ಗೋಪಾಲಕೃಷ್ಣನ್ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ಬಿಆರ್‌ಪಿಎಂಎಸ್ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಕೆ.ದಯಾನಂದ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಕೆ.ಎನ್.ಶ್ರೀಕಂಠನ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net