ಕೆ.ಕಲ್ಲಹಳ್ಳಿ ಬಳಿ ಬೋನಿಗೆ ಬಿದ್ದ ಕರಡಿ

Untitled design (2)
ಕೆ.ಕಲ್ಲಹಳ್ಳಿ ಗ್ರಾಮದ ಹಳ್ಳದ ಬಳಿ ವಲಯ ಅರಣ್ಯ ಸಿಬ್ಬಂದಿ ಕರಡಿಯನ್ನು ಸೆರೆಹಿಡಿದಿರುವುದು. ವಲಯ ಅರಣ್ಯಾಧಿಕಾರಿ ಕೆ.ಮಲ್ಲಪ್ಪ , ಅರಣ್ಯಾಧಿಕಾರಿಗಳಾದ ರಮೇಶ ದಶರಥ ರಾಥೋಡ್, ಕರಿಬಸಯ್ಯ ಇದ್ದರು.
Published on

ಹರಪನಹಳ್ಳಿ: ಕೆ.ಕಲ್ಲಹಳ್ಳಿಯ ಹಳ್ಳದ ಸಮೀಪದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಅಳವಡಿಸಿದ್ದ ಬೋನಿನಲ್ಲಿ ಶುಕ್ರವಾರ ರಾತ್ರಿ 9 ವರ್ಷದ ಹೆಣ್ಣು ಕರಡಿ ಸೆರೆಯಾಗಿದೆ.


ಕೆ.ಕಲ್ಲಹಳ್ಳಿ ಗ್ರಾಪಂ ವ್ಯಾಪ್ತಿಗೆ ಬರುವ ಹಂಪಾಪುರ, ಕಲ್ಲಹಳ್ಳಿ, ಮಜ್ಜಿಗೇರಿ, ಅರೆಮಜ್ಜಿಗೇರಿ, ಇಟ್ಟಿಗುಡಿ, ಬೇವಿನಹಳ್ಳಿ ಸೇರಿ ಸುತ್ತಲಿನ ಗ್ರಾಮಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಲ್ಲಿ ಎರಡು ಕರಡಿಗಳು ಪ್ರತ್ಯಕ್ಷವಾಗಿದ್ದವು. ಕರಡಿಯೊಂದು ಯುವಕನ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು. ರೈತರು ಜಮೀನುಗಳಿಗೆ ತೆರಳಲು ಭಯಪಡುತ್ತಿದ್ದರು. ವಲಯ ಅರಣ್ಯ ಇಲಾಖೆ ಅಧಿಕಾರಿ ಮಲ್ಲಪ್ಪ ಸ್ಥಳಕ್ಕೆ ಭೇಟಿ ನೀಡಿ ಹತ್ತಕ್ಕು ಹೆಚ್ಚು ಜನ ಅರಣ್ಯ ಪಾಲಕರನ್ನು ನಿಯೋಜಿಸಿದ್ದರು. ಕೆ.ಕಲ್ಲಹಳ್ಳಿ ಗ್ರಾಮದ ಹೊರವಲಯದ ಹಳ್ಳದ ಸಮೀಪ ಕರಡಿ ಸೆರೆಹಿಡಿಯಲು ಬೋನು ಅಳವಡಿಸಲಾಗಿತ್ತು. ಶುಕ್ರವಾರ ರಾತ್ರಿ 10 ಗಂಟೆಗೆ ಅರಣ್ಯ ಸಿಬ್ಬಂದಿಗಳು ಗಸ್ತು ತಿರುಗುತ್ತಿರುವಾಗ ಕರಡಿ ಬೋನಿಗೆ ಬಿದ್ದಿದ್ದೆ. ಮೇಲಧಿಕಾರಿಗಳ ನಿರ್ದೇಶನದಂತೆ ಭದ್ರಾ ಅಭಯಾರಣ್ಯಕ್ಕೆ ಬಿಡಲಾಗಿದೆ.


ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಾಲಾನ್, ಹೊಸಪೇಟೆ ಸಹಾಯಕ ಸಂರಕ್ಷಣಾಧಿಕಾರಿ ಬಾಬು ಮೆಧಾ ಸಲಹೆಯಂತೆ, ವಲಯ ಅರಣ್ಯಾಧಿಕಾರಿ ಕೆ.ಮಲ್ಲಪ್ಪ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳಾದ ರಮೇಶ ದಶರಥ ರಾಥೋಡ್, ಕರಿಬಸಯ್ಯ, ಹಲುವಾಗಲು ಪಿಎಸ್‌ಐ ನಾಗರತ್ನಾ ಕಾರ್ಯಾಚರಣೆ ನಡೆಸಿದ್ದಾರೆ. ಪಶು ವೈದ್ಯಾಧಿಕಾರಿ ವಾಣಿ, ವೈದ್ಯ ಶಿವಕುಮಾರ ಜ್ಯೋತಿ, ಸಿಬ್ಬಂದಿ ಶಿವಕುಮಾರ, ಕೇದರನಾಥ, ರೋಹನ ಕೆ.ರಾಥೋಡ, ಲಕ್ಷ್ಮಣ, ಸೋಮನಾಯ್ಕ, ರಾಘವೇಂದ್ರ, ದುರುಗಪ್ಪ, ಕೆ.ಚಿಕ್ಕಪ್ಪ, ಪತ್ರೆಪ್ಪ, ಚನ್ನಬಸವ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net