ಅಪ್ಪೇನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಕೆ.ಜಯಣ್ಣ ಆಯ್ಕೆ

Untitled design (2)
ಕೂಡ್ಲಿಗಿ ತಾಲೂಕಿನ ಅಪ್ಪೇನಹಳ್ಳಿ ಗ್ರಾಪಂಗೆ ಅಧ್ಯಕ್ಷ ಕೆ.ಜಯಣ್ಣ, ಉಪಾಧ್ಯಕ್ಷೆಯಾಗಿ ಗೀತಾ ಮಲ್ಲಿಕಾರ್ಜುನ ಅವಿರೋಧವಾಗಿ ಆಯ್ಕೆಯಾದರು.
Published on

ಕೂಡ್ಲಿಗಿ: ತಾಲೂಕಿನ ಅಪ್ಪೇನಹಳ್ಳಿ ಗ್ರಾಪಂಗೆ ಎರಡನೇ ಅವಧಿಗೆ ಅಧ್ಯಕ್ಷ ಕೆ.ಜಯಣ್ಣ, ಉಪಾಧ್ಯಕ್ಷೆಯಾಗಿ ಗೀತಾ ಮಲ್ಲಿಕಾರ್ಜುನ ಅವಿರೋಧವಾಗಿ ಬುಧವಾರ ಆಯ್ಕೆಯಾದರು.


ಗ್ರಾಪಂಯು ಒಟ್ಟು 19 ಸದಸ್ಯರನ್ನು ಹೊಂದಿದ್ದು, 12 ಜನ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದು, 7 ಜನ ಗೈರಾಗಿದ್ದರು. ಅಧ್ಯಕ್ಷ ಸ್ಥಾನ ಎಸ್ಟಿ, ಉಪಾಧ್ಯಕ್ಷ ಸ್ಥಾನ ಎಸ್ಟಿ ಮಹಿಳೆಗೆ ಮೀಸಲು ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಕೆ.ಜಯಣ್ಣ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗೀತಾ ಮಲ್ಲಿಕಾರ್ಜುನ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಟಿ.ಜಗದೀಶ್ ಘೋಷಣೆ ಮಾಡಿದರು.

ಪಿಡಿಒ ಜಿ. ಹನುಮಂತಪ್ಪ, ಮುಖಂಡರಾದ ದಿನ್ನೆ ಮಲ್ಲಿಕಾರ್ಜುನ, ಆರ್.ಎಸ್.ಪ್ರಾಣೇಶ್ ರಾವ್, ವಿ.ಸದಾನಂದ, ವೆಂಕಟಸ್ವಾಮಿ, ಹನುಮಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net