

ಹಿರೇಕೆರೂರ: ಪಟ್ಟಣದ ಮಾರುತಿ ಪದವಿ ಪೂರ್ವ ಕಾಲೇಜ್‌ನಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಿಇಎಸ್ ವಿದ್ಯಾಸಂಸ್ಥೆಯ ಕೆ.ಎಚ್. ಪಾಟೀಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾರೆ.
ವಿದ್ಯಾರ್ಥಿಗಳನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ಎಸ್.ಬಿ. ತಿಪ್ಪಣ್ಣನವರ, ಎಸ್.ಎಸ್.ಪಾಟೀಲ, ಎಸ್.ವೀರಭದ್ರಯ್ಯ, ಕೆ.ಆರ್. ಲಮಾಣಿ, ರಾಜಶೇಖರ ಕರೆಗೌಡ್ರ, ಎನ್.ಡಿ. ನಿಂಗಪ್ಪನವರ, ಎಂ.ಪಿ. ರೇಖಾ ಇದ್ದರು.