ಕೆ.ಬೆಳತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಂಘಕ್ಕೆ ಆಯ್ಕೆ

ಸರಗೂರು ತಾಲೂಕಿನ ಕೆ.ಬೆಳತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಸತೀಶ್‌ಗೌಡ, ಉಪಾಧ್ಯಕ್ಷ ನಾಗರಾಜು ಅವರನ್ನು ಬೆಂಬಲಿಗರು ಸನ್ಮಾನಿಸಿದರು.
ಸರಗೂರು ತಾಲೂಕಿನ ಕೆ.ಬೆಳತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಸತೀಶ್‌ಗೌಡ, ಉಪಾಧ್ಯಕ್ಷ ನಾಗರಾಜು ಅವರನ್ನು ಬೆಂಬಲಿಗರು ಸನ್ಮಾನಿಸಿದರು.
Published on

ಸರಗೂರು; ತಾಲೂಕಿನ ಕೆ.ಬೆಳತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ಸತೀಶ್ ಗೌಡ, ಉಪಾಧ್ಯಕ್ಷರಾಗಿ ಹುಣಸಹಳ್ಳಿ ನಾಗರಾಜು ಆಯ್ಕೆಯಾದರು.

ಸಂಘದ ಕಚೇರಿಯಲ್ಲಿ ಶುಕ್ರವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸತೀಶ್‌ಗೌಡ, ಪದ್ಮರಾಜು ಹಾಗೂ ಸುಮಾ ನಾಮಪತ್ರ ಸಲ್ಲಿಸಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ಹುಣಸಹಳ್ಳಿ ನಾಗರಾಜು ಹಾಗೂ ಪುಟ್ಟರಾಜು ಉಮೇದುವಾರಿಕೆ ಸಲ್ಲಿಸಿದರು. ನಂತರ ಧ್ಯಕ್ಷ ಸ್ಥಾನದ ಆಕಾಂಕ್ಷಿ ಪದ್ಮರಾಜು ನಾಮಪತ್ರ ವಾಪಸ್ ಪಡೆದಿದ್ದು, ಚುನಾವಣೆಯಲ್ಲಿ ಸತೀಶ್‌ಗೌಡ 8 ಮತ ಪಡೆದು ಭರ್ಜರಿ ಜಯಗಳಿಸಿ ದರೆ, ಸುಮಾ 5 ಮತ ಪಡೆದು ಸೋಲು ಅನುಭವಿಸಿದರು.

ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಹುಣಸಹಳ್ಳಿ ನಾಗರಾಜು 8 ಮತ ಪಡೆದು ಜಯಗಳಿಸಿದರೆ, ಪ್ರತಿಸ್ಪರ್ಧಿ ಪುಟ್ಟರಾಜು 5 ಮತ ಪಡೆದು ಪರಾಭವಗೊಂಡರು. ಫಲಿತಾಂಶ ಹೊರ ಬೀಳುತ್ತಿದ್ದಂತೆ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ನೂತನ ಅಧ್ಯಕ್ಷ ಸತೀಶ್ ಗೌಡ ಮಾತನಾಡಿ, ಕೆ.ಬೆಳತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಭಿವೃದ್ಧಿ ಹೊಂದಬೇಕಾಗಿದೆ. ರೈತರಿಗೆ ಸಾಲ ಸೌಲಭ್ಯ ನೀಡಬೇಕಾಗಿದ್ದು, ಸರ್ಕಾರದಿಂದ ದೊರೆಯುವ ವಿಶೇಷ ಯೋಜನೆಗಳನ್ನು ಶಾಸಕರಾದ ಅನಿಲ್‌ಕುಮಾರ್ ಅವರ ಜತೆಗೂಡಿ ತಂದು ಈ ಭಾಗದ ರೈತರು ಮತ್ತು ಸಂಘದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

ಸಂಘದ ನಿರ್ದೇಶಕರಾದ ಬೆಟ್ಟೇಗೌಡ, ಕೆಂಪಮ್ಮ, ಕೂಸಮ್ಮ, ವಿನೋದಾ, ಮಹದೇವು, ದಿವಾಕರ್, ಸುವರ್ಣಮ್ಮ, ಡಿಸಿಸಿ ಬ್ಯಾಂಕ್ ಸೂಪರ್ವೈಸರ್ ಚಂದ್ರು, ತಂಬಾಕು ಮಂಡಳಿಯ ರಸಗೊಬ್ಬರ ಸರಬರಾಜು ಕ್ರಾಫ್ ಕಮಿಟಿ ಸದಸ್ಯ ಪರಶಿವಮೂರ್ತಿ, ಮುಖಂಡರಾದ ಮಹದೇವು, ನಾಗನಹಳ್ಳಿ ಪ್ರದೀಪ್, ರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net