

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಉತ್ತಮ ಸಂಘಟನೆಯೊಂದಿಗೆ ಶಾಮಿಯಾನ ಕ್ಷೇತ್ರದಲ್ಲಿ ಸೌಂದರ್ಯ ಪ್ರಜ್ಞೆ, ದೇಶಿಯ ಶೈಲಿಯೂ ಮುಖ್ಯ. ದೇಶದ ಸಂಸ್ಕೃತಿ ಪ್ರತಿಬಿಂಬಿಸುವ ಡೆಕೋರೇಷನ್‌ಗಳ ಪ್ರಯೋಗಗಳು ಆಗಬೇಕಾಗಿದೆ. ಶಾಮಿಯಾನ ಕಷ್ಟದ ವಹಿವಾಟು. ನುರಿತ ನೌಕರವೃಂದ ಬಹಳ ಮುಖ್ಯ. ಸಹನೆ, ತಾಳ್ಮೆ, ನಿರಂತರ ಕಠಿಣ ಪರಿಶ್ರಮ ಬೇಕಾಗುತ್ತದೆ. ಇದರ ನಡುವೆಯೂ ಸಮಾಜದ ಪರಿಕಲ್ಪನೆಯೊಂದಿಗೆ ಸಾಗಬೇಕಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.
ದ.ಕ. ಜಿಲ್ಲಾ ಶಾಮಿಯಾನ ಮಾಲೀಕರ ಸಂಘದ ಮೂಡುಬಿದಿರೆ ಘಟಕದ ಆಶ್ರಯದಲ್ಲಿ ವಿದ್ಯಾಗಿರಿ ಆಳ್ವಾಸ್ ಕೃಷಿಸಿರಿ ವೇದಿಕೆಯಲ್ಲಿ ಬುಧವಾರ ಜಿಲ್ಲಾ ವಾರ್ಷಿಕ ಮಿಲನೋತ್ಸವ 2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಘದ ವತಿಯಿಂದ ಡಾ.ಎಂ.ಮೋಹನ ಆಳ್ವ ಅವರನ್ನು ಸನ್ಮಾನಿಸಲಾಯಿತು. ಸಂಘದ ವೆಬ್‌ಸೈಟ್ ಲೋಕಾರ್ಪಣೆಗೊಳಿಸಲಾಯಿತು. ಸಂಘದ ಅಧ್ಯಕ್ಷ ಬಾಬು ಕೆ.ವಿಟ್ಲ ಅಧ್ಯಕ್ಷತೆ ವಹಿಸಿದರು. ಮೂಡುಬಿದಿರೆ ಚೌಟರ ಕುಲದೀಪ ಎಂ., ಮಾಜಿ ಸಂಸದರು, ಬಿಜೆಪಿ ದ.ಕ. ಮಾಜಿ ಅಧ್ಯಕ್ಷ ಸುದರ್ಶನ್ ಎಂ., ಉದ್ಯಮಿ ಅಶ್ವಿನ್ ಪಿರೇರಾ, ಶ್ರೀಕ್ಷೇತ್ರ ಪುತ್ತಿಗೆ ಪ್ರಧಾನ ಅರ್ಚಕ ಅಡಿಗಳ್ ಅನಂತಕೃಷ್ಣ ಭಟ್, ಮೂಡುಬಿದಿರೆ ಜುಮಾ ಮಸೀದಿ ಧರ್ಮಗುರು ಶರೀಫ್ ದಾರಿಮಿ, ಮೂಡುಬಿದಿರೆ ಕೊರ್ಪುಸ್ ಕ್ರಿಸ್ತಿ ಚರ್ಚ್ ಧರ್ಮಗುರು ಓನಿಲ್ ಡಿಸೋಜ, ವಕೀಲ ಜಯಪ್ರಕಾಶ್ ಭಂಡಾರಿ, ಉದ್ಯಮಿ ಆರ್.ಕೆ ಭಟ್ ಮುಖ್ಯ ಅತಿಥಿಗಳಾಗಿದ್ದರು.
ಸಂಘದ ಮೂಡುಬಿದಿರೆ ಘಟಕ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ, ಬಂಟ್ವಾಳ ಘಟಕ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಮಂಗಳೂರು ಘಟಕ ಅಧ್ಯಕ್ಷ ಬಾಲಕೃಷ್ಣ ಕದ್ರಿ, ಬೆಳ್ತಂಗಡಿ ಘಟಕ ಅಧ್ಯಕ್ಷ ಬಿ.ಹರೀಶ್ ಕುಮಾರ್, ವಿಟ್ಲ ಘಟಕ ಅಧ್ಯಕ್ಷ ಪದ್ಮನಾಭ ಶೆಟ್ಟಿ ಕುಡ್ಮುಗೇರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀಯುಷ್ ಮ್ಯಾಕ್ಸಿಂ ಸಿಕ್ವೇರಾ, ಜಿಲ್ಲಾ ಕೋಶಾಧಿಕಾರಿ ನಿಶಿತ್ ಪೂಜಾರಿ, ಮೂಡುಬಿದಿರೆ ಘಟಕದ ಪ್ರಧಾನ ಕಾರ್ಯದರ್ಶಿ ದಿವಾಕರ ಮೂಡುಬಿದಿರೆ, ಕೋಶಾಧಿಕಾರಿ ಆಲ್ಡ್ರಿನ್ ಫೆರ್ನಾಂಡಿಸ್, ಜಿಲ್ಲಾ ಹಾಗೂ ತಾಲೂಕು ಘಟಕಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ದಿನೇಶ್ ಸುವರ್ಣ ರಾಯಿ ಹಾಗೂ ಸತೀಶ್ ಹೊಸ್ಮಾರ್ ಕಾರ್ಯಕ್ರಮ ನಿರೂಪಿಸಿದರು.