

ಮದ್ದೂರು: ತಾಲೂಕಿನ ಗೆಜ್ಜಲಗೆರೆ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಬಿ.ಕೃಷ್ಣಪ್ಪ ಆಯ್ಕೆಗೊಂಡರು.
ಸಿದ್ದಪ್ಪ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸಂಘದ ಸಭಾಂಗಣದಲ್ಲಿ ಮಂಗಳವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಕೆ.ಬಿ.ಕೃಷ್ಣಪ್ಪ 6 ಮತ ಪಡೆದು ಜಯಶೀಲರಾದರೆ, ಕೆ.ಎಂ.ಸಿದ್ದಪ್ಪಗೌಡ 4 ಮತಗಳನ್ನು ಪಡೆದು ಪರಾಭವಗೊಂಡರು. ಚುನಾವಣಾಧಿಕಾರಿಯಾಗಿ ಬಿ.ಆಶಾ ಕಾರ್ಯನಿರ್ವಹಿಸಿದರು.
ಕೆ.ಬಿ.ಕೃಷ್ಣಪ್ಪ ಮಾತನಾಡಿ, ಸಂಘದ ಎಲ್ಲ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಂಘದ ನಿರ್ದೇಶಕರಾದ ಜಿ.ಬಿ.ಕೃಷ್ಣ, ಕಾಶಿ ಹೆಗ್ಗಡೆ, ಜಿ.ಎಸ್.ಮಹದೇವು, ಸುಶೀಲಮ್ಮ, ಕೆ.ಬಿ.ಪ್ರಭಾವತಿ, ವೃತ್ತ ಮೇಲ್ವಿಚಾರಕ ಸಿ.ಅರವಿಂದ್, ಸಿಇಒ ಕೆ.ಡಿ.ರಾಜೇಶ್, ಮುಖಂಡರಾದ ಕೆ.ಎಲ್.ಪ್ರಭು, ಜಿ.ಪಿ.ಮೋಹನ್, ಜಿ.ಎಸ್.ಲಿಂಗರಾಜು, ಶಿವರಾಮು, ಜಿ.ಜೆ.ಸಂತೋಷ್ ಇದ್ದರು.