ಮಾಜಿ ಸಚಿವ, ಜೆಡಿಎಸ್​ ಹಿರಿಯ ನಾಯಕ ಅಮರನಾಥ ಶೆಟ್ಟಿ ವಿಧಿವಶ: ಟ್ವೀಟ್​ ಮೂಲಕ ಸಂತಾಪ ಸೂಚಿಸಿದ ಎಚ್​ಡಿಡಿ, ಎಚ್​ಡಿಕೆ

Amaranath
Published on

ಮಂಗಳೂರು: ಮಾಜಿ ಸಚಿವ ಹಾಗೂ ಜೆಡಿಎಸ್​ ಹಿರಿಯ ನಾಯಕ ಕೆ. ಅಮರನಾಥ ಶೆಟ್ಟಿ(80) ಅವರು ಸೋಮವಾರ ವಿಧಿವಶರಾಗಿದ್ದಾರೆ.

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅಮರನಾಥ ಶೆಟ್ಟಿಯವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ನಿಧನರಾಗಿದ್ದಾರೆ.

ಜೆಡಿಎಸ್ ಅನ್ನು ಕರಾವಳಿಯಲ್ಲಿ ಕಟ್ಟಿ ಬೆಳೆಸಿದ ರಾಜಕಾರಣಿ ಎಂಬ ಹೆಸರಿಗೆ ಪಾತ್ರರಾಗಿದ್ದರು. ಮೂರು ಬಾರಿ ಮೂಲ್ಕಿ-ಮೂಡಬಿದಿರೆ ಶಾಸಕರಾಗಿದ್ದ ಅಮರನಾಥ ಶೆಟ್ಟಿ, ಪ್ರವಾಸೋದ್ಯಮ-ಮುಜರಾಯಿ ಸಚಿವರಾಗಿದ್ದರು. ಪಂಚಾಯತ್ ಮಟ್ಟದಿಂದ ಸಚಿವ ಸ್ಥಾನದವರೆಗೂ ನಾಯಕರಾಗಿ ಬೆಳದಂತಹ ವಿಶಿಷ್ಠ ರಾಜಕಾರಣಿಯಾಗಿದ್ದರು.

ಅಮರನಾಥ ಶೆಟ್ಟಿ ಅವರ ನಿಧನಕ್ಕೆ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ಟ್ವೀಟ್​ ಮೂಲಕ ಸಂತಾಪ ಸೂಚಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net