ಜ್ಯೋತಿರ್ಲಿಂಗಗಳ ಶೋಭಾಯಾತ್ರೆ

26 SND 05
ಸಿಂಧನೂರು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಬುಧವಾರ ಶಿವರಾತ್ರಿ ಮಹೋತ್ಸವ ಅಂಗವಾಗಿ ನಗರದಲ್ಲಿ 12 ಜ್ಯೋತಿರ್ಲಿಂಗಗಳ ಶೋಭಾಯಾತ್ರೆ ನಡೆಯಿತು.
Published on

ಸಿಂಧನೂರು: ನಗರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಬುಧವಾರ ಶಿವರಾತ್ರಿ ಮಹೋತ್ಸವ ಅಂಗವಾಗಿ ನಗರದಲ್ಲಿ 12 ಜ್ಯೋತಿರ್ಲಿಂಗಗಳ ಶೋಭಾಯಾತ್ರೆ ನಡೆಯಿತು.

ಸುಕಾಲಪೇಟೆ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಆರಂಭಗೊಂಡ ಯಾತ್ರೆ, ಚನ್ನಮ್ಮ ವೃತ್ತ, ಮಹಾವೀರ ವೃತ್ತದಿಂದ ಹಳೇ ಬಜಾರ್ ಮೂಲಕ ಬಪ್ಪೂರ ರಸ್ತೆಯಿಂದ ಬಾಬು ಜಗಜೀವನ್‌ರಾಂ ವೃತ್ತದಿಂದ ಬಸವ ವೃತ್ತದ ಮೂಲಕ ಗಾಂಧಿ ವೃತ್ತ ತಲುಪಿತು. ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಪಾರ್ವತಿ ಅಕ್ಕ, ಸೀಮಾ ಅಕ್ಕ, ವೀರಭದ್ರಪ್ಪ ವಿಶ್ವಕರ್ಮ, ಬಸಪ್ಪಯ್ಯ, ಮಹಾದೇವಪ್ಪ, ತಿಮ್ಮಾರೆಡ್ಡಿ, ರೂಪಾ, ವೀರಭದ್ರಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net