ಶಿವರಾತ್ರಿ ನಿಮಿತ್ತ ಜ್ಯೋತಿರ್ಲಿಂಗಗಳ ಮೆರವಣಿಗೆ

08-03-Shiva-5
ಶಿವರಾತ್ರಿ ನಿಮಿತ್ತ ರಾಯಚೂರಿನ ಪ್ರಮುಖ ಬೀದಿಗಳಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಿಂದ ಶುಕ್ರವಾರ ಸಂಜೆ ಶಾಂತಿಯಾತ್ರೆ ನಡೆಸಲಾಯಿತು. ವಿದ್ಯಾಲಯದ ಮುಖ್ಯಸ್ಥೆ ಸ್ಮೀತಾ ಅಕ್ಕ, ಸಹ ಸಂಚಾಲಕಿ ಶಾರದಾ, ಮುಖಂಡರಾದ ರವಿ ಬೋಸರಾಜು, ಕೆ.ದೇವಣ್ಣ ನಾಯಕ, ಡಾ.ಬಸವರಾಜ ಕಳಸ, ದಂಡಪ್ಪ ಬಿರಾದರ, ಡಾ.ಅರುಣಾ ಹಿರೇಮಠ, ದೇವೇಂದ್ರಮ್ಮ ಇದ್ದರು.
Published on

ರಾಯಚೂರು: ಮಹಾ ಶಿವರಾತ್ರಿ ನಿಮಿತ್ತ ಬ್ರಹ್ಮಕುಮಾರ ಈಶ್ವರೀಯ ವಿದ್ಯಾಲಯದಿಂದ ನಗರದಲ್ಲಿ ಶುಕ್ರವಾರ ಸಂಜೆ ಜ್ಯೋತಿರ್ಲಿಂಗಗಳ ಮೆರವಣಿಗೆ ಹಾಗೂ ಶಾಂತಿಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ವಿದ್ಯಾಲಯದಿಂದ ಆರಂಭವಾದ ಮೆರವಣಿಗೆ ನಗರದ ಅಂಬೇಡ್ಕರ್ ವೃತ್ತ, ಸೂಪರ್ ಮಾರ್ಕೆಟ್, ಮಹಾವೀರ ವೃತ್ತ, ಚಂದ್ರವೌಳೇಶ್ವರ ವೃತ್ತ, ಬಸವೇಶ್ವರ ವೃತ್ತದ ಮೂಲಕ ವಾಲ್ಕಾಟ್ ಮೈದಾನಕ್ಕೆ ತಲುಪಿತು.
ಮೈದಾನದಲ್ಲಿ 40 ಅಡಿ ಎತ್ತರದ ಬೃಹತ್ ಶಿವಲಿಂಗ ದರ್ಶನ, ಸೃಷ್ಠಿ ಚಕ್ರ ಹಾಗೂ ಆಧ್ಯಾತ್ಮಿಕ ರಹಸ್ಯ ಚಿತ್ರ ಪ್ರದರ್ಶನವನ್ನು ಸಚಿವ ಎನ್.ಎಸ್.ಬೋಸರಾಜು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಿದ್ಯಾಲಯದ ಮುಖ್ಯಸ್ಥೆ ಸ್ಮೀತಾ ಅಕ್ಕ, ಸಹ ಸಂಚಾಲಕಿ ಶಾರದಾ, ಮುಖಂಡರಾದ ರವಿ ಬೋಸರಾಜು, ಕೆ.ದೇವಣ್ಣ ನಾಯಕ, ಡಾ.ಬಸವರಾಜ ಕಳಸ, ದಂಡಪ್ಪ ಬಿರಾದರ, ಡಾ.ಅರುಣಾ ಹಿರೇಮಠ, ದೇವೇಂದ್ರಮ್ಮ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net