ಶಿಕ್ಷಣ ಕ್ಷೇತ್ರದ ಬೆಳಕು ಜ್ಯೋತಿಬಾ ಫುಲೆ

pule
ತೇರದಾಳ ಪಟ್ಟಣದ ಕಲ್ಲಟ್ಟಿ ಗಲ್ಲಿಯ ಜ್ಯೋತಿಬಾ ಫುಲೆ ಸ್ಮಾರಕ ವೃತ್ತದಲ್ಲಿ ಜ್ಯೋತಿಬಾ ಫುಲೆ ಜನ್ಮ ದಿನೋತ್ಸವ ಆಚರಿಸಲಾಯಿತು. ಬಸವರಾಜ ಬಾಳಿಕಾಯಿ, ತುಳಜಪ್ಪ ಅಥಣಿ ಇತರರಿದ್ದರು.
Published on

ತೇರದಾಳ: ಸಮಾನತೆ ಹರಿಕಾರ, ಸಮಾಜ ಸುಧಾರಕ ಜ್ಯೋತಿಬಾ ಫುಲೆ ಜನ್ಮ ದಿನೋತ್ಸವ ನಿಮಿತ್ತ ಪಟ್ಟಣದ ಕಲ್ಲಟ್ಟಿ ಗಲ್ಲಿಯ ಜ್ಯೋತಿಬಾ ಫುಲೆ ಸ್ಮಾರಕ ವೃತ್ತದಲ್ಲಿ ಗುರುವಾರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು. ಹಿರೇಮಠದ ಮುರಗಯ್ಯ ಪೂಜೆ ಸಲ್ಲಿಸಿ, ಆರುತಿ ಮಾಡಿದರು.

ಮುಖಂಡ ಬಸವರಾಜ ಬಾಳಿಕಾಯಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಬೆಳಕು ಚೆಲ್ಲುವ ಮೂಲಕ ಫುಲೆ ಅವರು ರಾಷ್ಟ್ರ ಬೆಳಗಿದ್ದಾರೆ. ಏನೇ ಕಷ್ಟ ಬಂದರೂ ವಿಚಲಿತರಾಗದೆ ಸಮಾಜ ಸುಧಾರಣೆಗೆ ಮುಂದಾದ ಫುಲೆ ದಂಪತಿ ತತ್ವಾದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕಾಗಿದೆ ಎಂದರು.

ಪಟ್ಟಣದ ಮಾಳಿ ಸಮಾಜದ ಹಿರಿಯ ತುಳಜಪ್ಪ ಅಥಣಿ, ನಿಂಗಪ್ಪ ಮಾಲಗಾಂವಿ, ಪರಪ್ಪ ಯಡವಣ್ಣವರ, ಅಲ್ಲಪ್ಪ ಕೊಕಟನೂರ, ಬಸವರಾಜ ನಿರ್ವಾಣಿ, ದಾನಪ್ಪ ದೇಸ್ತೋಟ, ರಾಜು ಹೊಸಮನಿ, ಬಸವರಾಜ ಬಾಳಿಕಾಯಿ, ಸುರೇಶ ದೇಸ್ತೋಟ, ಕುಮಾರ ಅಥಣಿ, ಪ್ರಭು ಮಾಳಿ, ಸಂಜು ಹೊಸಮನಿ, ಎಂ.ಬಿ. ಮಾಳೇದ, ಕುಮಾರ ಕೌಜಲಗಿ, ಪ್ರದೀಪ ನಿಡೋಣಿ, ಅಡಿವೆಪ್ಪ ಹೊಸಮನಿ, ಮಲ್ಲಪ್ಪ ಹೊಸಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net