

ಮದ್ದೂರು: ತಾಲೂಕಿನ ಕೊಪ್ಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತೆ ಜ್ಯೋತಿ ಮಹೇಶ್ ಅವರೋಧವಾಗಿ ಆಯ್ಕೆಯಾದರು.
ಸಾವಿತ್ರಿ ಸುರೇಶ್ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಸೋಮವಾರ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಜ್ಯೋತಿ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಧನಂಜಯ ಅವಿರೋಧ ಆಯ್ಕೆ ಘೋಷಿಸಿದರು.
ನೂತನ ಉಪಾಧ್ಯಕ್ಷೆ ಜ್ಯೋತಿ ಮಹೇಶ್ ಮಾತನಾಡಿ, ಕೃಷಿ ಚಲುವರಾಯಸ್ವಾಮಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿವಾಕರ್ ಹಾಗೂ ಪಂಚಾಯಿತಿಯ ಎಲ್ಲ ಸದಸ್ಯರ ಸಹಕಾರದಿಂದ ಉಪಾಧ್ಯಕ್ಷೆಯಾಗಲು ಸಾಧ್ಯವಾಯಿತು ಎಂದರು .
ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ, ಕುಡಿಯುವ ನೀರು, ಸ್ವಚ್ಛತೆಗೆ ಆದ್ಯತೆ ನೀಡುವ ಹಾಗೂ ಸರ್ಕಾರ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಪಂಚಾಯಿತಿ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಪ್ರಾಮಾಣಿಕವಾಗಿ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ನಾಗಮಂಗಲ ಬ್ಲಾಕ್ ಕಾಂಗೆಸ್ ಅಧ್ಯಕ್ಷ ಕೆ.ಎನ್.ದಿವಾಕರ್, ಗ್ರಾಪಂ ಅಧ್ಯಕ್ಷ ಸಂತೋಷ್ ಕೊಟ್ಟಿಗೆಯಾರ್, ಸದಸ್ಯರಾದ ನವೀನ್, ಕವಿತಾ ದಿವಾಕರ, ಉಮಾಶಂಕರ್, ಕೆ.ಸಿ.ಗಿರೀಶ್, ಪರ್ವಿಜ್ ಅಹಮ್ಮದ್, ಕುಮಾರ್ ಕೊಪ್ಪ, ರುದ್ರೇಶ್, ಸಾವಿತ್ರಿ ಸುರೇಶ್, ಮಮತಾ ಕೃಷ್ಣೇಗೌಡ, ವಿಜಯಕುಮಾರಿ ಆನಂದ್, ಮುಖಂಡರಾದ ಬದ್ರೇಗೌಡ, ಶ್ರೀನಿವಾಸ್, ಕೃಷ್ಣ, ಸುರೇಶ್, ಜಿ.ಕೆ.ಜಯರಾಮ್ ಇದ್ದರು.