ಮುಕ್ಕಲ ಗ್ರಾಪಂಗೆ ಜ್ಯೋತಿ ಅಧ್ಯಕ್ಷೆ

10-klg 2 JYOTI PRESIDENT
Published on

ಕಲಘಟಗಿ: ತಾಲೂಕಿನ ಮುಕ್ಕಲ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಜ್ಯೋತಿ ಮಲ್ಲಪ್ಪ ಗಾಡಗೋಳಿ ಆಯ್ಕೆಯಾಗಿದ್ದಾರೆ.

ಮಂಗಳವಾರ ಗ್ರಾಮ ಪಂಚಾಯಿತಿ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಒಟ್ಟು 2 ನಾಮಪತ್ರ ಸಲ್ಲಿಕೆಯಾಗಿದ್ದವು. ಅದರಲ್ಲಿ ಜ್ಯೋತಿ ಗಾಡಗೋಳಿ, ನಾಗವೇಣಿ ಬಸವರಾಜ ಹಸರಂಬಿ ನಾಮಪತ್ರ ಸಲ್ಲಿಸಿದರು. ಒಟ್ಟು 10 ಮತಗಳ ಪೈಕಿ ನಾಗವೇಣಿ 3 ಮತಗಳನ್ನು ಪಡೆದರೆ, ಜ್ಯೋತಿ 6 ಮತಗಳನ್ನು ಪಡೆದು ಜಯಗಳಿಸಿದರು. 1 ಮತ ತಿರಸ್ಕೃತಗೊಂಡಿದೆ. ನೂತನ ಅಧ್ಯಕ್ಷೆ ಜ್ಯೋತಿ ಗಾಡಗೋಳಿ ಅವರನ್ನು ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಸನ್ಮಾನಿಸಿದರು. ಗ್ರಾಪಂ ಉಪಾಧ್ಯಕ್ಷೆ ಯಲ್ಲವ್ವ ವಾಲಿಕಾರ, ಸದಸ್ಯರಾದ ನಿಂಗಪ್ಪ ಕಲಕಟ್ಟಿ, ಸಹದೇವಪ್ಪ ಹೋರಕೇರಿ, ಶ್ರೀಕಾಂತಗೌಡ ಪಾಟೀಲ, ಎಸ್.ಎಸ್. ಪಾಟೀಲ, ಮುತ್ತಪ್ಪ ಅಂಗಡಿ , ಅರ್ಜುನ ಗದುಗಿನ, ನಾಗಪ್ಪ ಕನಕಪ್ಪಣವರ, ಮಹಾದೇವ ಹೊರಕೇರಿ, ನಾಗಪ್ಪ ಹೊರಕೇರಿ, ಶಂಕ್ರಪ್ಪ ಚಿಂಚಲಿ, ಚನ್ನಪ್ಪ ಯರೇಬೈಲ್, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net