ಜಯಲಕ್ಷ್ಮೀಗೆ ಒಲಿದ ಅತ್ತಿಬೆಲೆ ಪುರಸಭೆ: ಅವಿರೋಧವಾಗಿ ಆಯ್ಕೆಗೆ ಬೆಂಬಲಿಗರ ಸಂತಸ

06ank news and photos 06
Published on

ಆನೇಕಲ್: ತಾಲೂಕಿನ ಅತ್ತಿಬೆಲೆ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಯಲಕ್ಷ್ಮೀ ಕೆ.ವೆಂಕಟೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮಹಾದೇವಯ್ಯ ಸೋಮವಾರ ಘೋಷಣೆ ಮಾಡಿದರು.

ಅತ್ತಿಬೆಲೆ ಪುರಸಭೆಗೆ ಹಿಂದೆ ಪ್ರಭಾರಿ ಅಧ್ಯಕ್ಷರನ್ನು ನೇಮಕ ಮಾಡಲಾಗಿತ್ತು. ಹಾಲಿ ಅಧ್ಯಕ್ಷರ ಚುನಾವಣೆ ಸೋಮವಾರ ನಡೆಸಲಾಗಿದ್ದು ಒಂದೇ ನಾಮಪತ್ರ ಸಲ್ಲಿಕೆ ಆಗಿದ್ದರಿಂದ ಅವಿರೋಧವಾಗಿ ಜಯಲಕ್ಷ್ಮೀ ಆಯ್ಕೆಯಾದರು. ಅತ್ತಿಬೆಲೆ ಪುರಸಭೆಯಲ್ಲಿ 14 ಬಿಜೆಪಿ, 8 ಕಾಂಗ್ರೆಸ್ ಹಾಗೂ ಒಂದು ಜೆಡಿಎಸ್ ಸದಸ್ಯರಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಯಾವುದೇ ನಾಮಪತ್ರ ಸಲ್ಲಿಕೆ ಆಗಿರಲಿಲ್ಲ.

ಮುಂದಿನ ದಿನಗಳಲ್ಲಿ ಎಲ್ಲ ಪಕ್ಷದವರು ಅಭಿವೃದ್ಧಿಗೆ ಸಹಕಾರ ನೀಡಿ ಹೆಚ್ಚಿನ ಅನುದಾನ ತರಲು ಸಹಕಾರ ನೀಡಬೇಕು ಎಂದು ಅಧ್ಯಕ್ಷೆ ಜಯಲಕ್ಷ್ಮೀ ಮನವಿ ಮಾಡಿದರು.

ಬೆಂಗಳೂರು ನಗರ ಜಿಪಂ ಮಾಜಿ ಅಧ್ಯಕ್ಷ ಕೆ.ಸಿ.ರಾಮಚಂದ್ರ ಮಾತನಾಡಿ, ಬಿಜೆಪಿ ಪಕ್ಷದಲ್ಲಿ ಸಣ್ಣ ವ್ಯಕ್ತಿ ಕೂಡ ಉತ್ತಮ ಸ್ಥಾನವನ್ನು ಅಲಂಕರಿಸಲು ಸಾಧ್ಯ . ನೀಡಿದ ಅವಕಾಶ ಸರಿಯಾಗಿ ಬಳಸಿಕೊಂಡು ಅಭಿವೃದ್ಧಿ ಕಾರ್ಯ ಮಾಡಿದರೆ ಮತ್ತೆ ಜನ ನಮ್ಮನ್ನು ಆಯ್ಕೆ ಮಾಡುತ್ತಾರೆ ಎಂದರು.nelamangala

ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ಎನ್.ಬಸವರಾಜು, ಗ್ರಾಪಂ ಮಾಜಿ ಅಧ್ಯಕ್ಷ ಪುರಸಭೆ ಹಾಲಿ ಸದಸ್ಯ ಗಣೇಶ್ ಮಾತನಾಡಿದರು.

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರಾಘವೇಂದ್ರ, ಬೊಮ್ಮನಹಳ್ಳಿ ವಿದಾನಸಭಾ ಕ್ಷೇತ್ರದ ಬಿಜೆಪಿ ಎಸ್ಸಿ ಎಸ್ಟಿ ಮೋರ್ಚಾ ಅಧ್ಯಕ್ಷ ಬಿ.ವೈ.ರಮೇಶ್, ಅಧ್ಯಕ್ಷ ಕೆ.ವಿ ಶಿವಪ್ಪ, ಬಮೂಲ್ ಮಾಜಿ ಅಧ್ಯಕ್ಷ ಬಿ.ಜಿ ಆಂಜನಪ್ಪ, ಹಿರಿಯ ಬಿಜೆಪಿ ಮುಖಂಡ ಮುಗಳೂರು ಆಂಜನಪ್ಪ, ಜಿಪಂ ಸದಸ್ಯರಾದ ಬಂಡಾಪುರ ರಾಮಚಂದ್ರ, ಎಂ.ಟಿ ನಾರಾಯಣಪ್ಪ, ಬಿಜೆಪಿ ಯುವಮೋರ್ಚಾ ಬೆಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷ ಬಳ್ಳೂರು ವಸಂತ್, ಪುರಸಭೆ ಉಪಾಧ್ಯಕ್ಷೆ ಮಂಜುಳಾ ಸೋನಿ, ಬಿಜೆಪಿ ಮುಖಂಡ ಪಟಾಪಟ್ ಶ್ರೀನಿವಾಸ್, ಪುರಸಭೆ ಸದಸ್ಯರಾದ ನಾರಾಯಣಸ್ವಾಮಿ, ಗಣೇಶ್, ಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಮಂಜುನಾಥ ದೇವ, ಜೆಡಿಎಸ್ ಪಟಾಪಟ್ ರವಿ, ಸುಲೋಚನಾ ಮಂಜುನಾಥ್, ಕಿತ್ತಗಾನಹಳ್ಳಿ ಹರೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net