ಜ್ವಾಲಾಮಾಲಿನಿ ದೇವಿಯ ವೈಭವದ ರಥೋತ್ಸವ

3 nrp 1..
ಎನ್.ಆರ್.ಪುರದ ಬಸ್ತಿಮಠದಲ್ಲಿ ಶ್ರೀ ಜ್ವಾಲಾಮಾಲಿನಿ ಅಮ್ಮನವರ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
Published on

ಎನ್.ಆರ್.ಪುರ: ಅತಿಶಯ ಕ್ಷೇತ್ರ ಸಿಂಹನಗದ್ದೆ ಬಸ್ತಿಮಠದಲ್ಲಿ ಶ್ರೀ 1008 ಚಂದ್ರಪ್ರಭ ಸ್ವಾಮಿ ಹಾಗೂ ಮಹಾಮಾತೆ ಶ್ರೀ ಜ್ವಾಲಾಮಾಲಿನಿ ಅಮ್ಮನವರ ಮಹಾರಥೋತ್ಸ ಬುಧವಾರ ವಿಜೃಂಭಣೆಯಿಂದ ನೆರವೇರಿತು.
ಬೆಳಗ್ಗೆ ಶ್ರೀ ಕ್ಷೇತ್ರದ ಭಗವಾನ್ ಶ್ರೀ 1008 ಚಂದ್ರಪ್ರಭ ಸ್ವಾಮಿ ತೀಥರ್ಂಕರರ ಬಸದಿಯಲ್ಲಿ 108 ಕಲಶಾಭಿಷೇಕ, 13 ವಿವಿಧ ಬಗೆಯ ದೃವ್ಯ ಅಭಿಷೇಕ, ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು. ಜ್ವಾಲಾಮಾಲಿನಿ ದೇವಿ ಬಸದಿಯಲ್ಲೂ ಜಲಾಭಿಷೇಕ, ದೃವ್ಯ ಅಭಿಷೇಕ, ಶ್ರೀ ಬಲಿ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹಾಗೂ ಕಂಬದಹಳ್ಳಿ ಜೈನ ಮಠದ ಭಾನುತೀರ್ತಿ ಭಟ್ಟಾರಕ ಸ್ವಾಮೀಜಿ ಉಪಸ್ಥಿತರಿದ್ದರು.
ನಂತರ ರಥಾರೋಹಣಕ್ಕೆ ಶ್ರೀ ಜ್ವಾಲಾಮಾಲಿನಿ ಅಮ್ಮನವಲ್ಲಿ ಪ್ರಸಾದ ಬೇಡಿಕೆ, ಮಠದ ಆವರಣದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಉತ್ಸವ ಮೂರ್ತಿಯೊಂದಿಗೆ ಭಗವಾನ್ ಶ್ರೀ1008 ಚಂದ್ರಪ್ರಭ ಸ್ವಾಮಿ ಹಾಗೂ ಶ್ರೀ ಜ್ವಾಲಾಮಾಲಿನಿ ಅಮ್ಮನವರ ರಥೋತ್ಸವ, ಸಮವಸರಣ ಪೂಜೆ ನಡೆಯಿತು.ನಂತರ ಈಡುಗಾಯಿ ಒಡೆಯಲಾಯಿತು.
ಸಂಜೆ ರಾಜಬೀದಿಯಲ್ಲಿ ವಾದ್ಯ, ಡೊಳ್ಳು ಕುಣಿತ, ಚಂಡೆಯೊಂದಿಗೆ ಭಗವಾನ್ ಶ್ರೀ1008 ಚಂದ್ರಪ್ರಭ ಸ್ವಾಮಿ ಹಾಗೂ ಶ್ರೀ ಜ್ವಾಲಾಮಾಲಿನಿ ಅಮ್ಮನವರ ಮಹಾ ರಥೋತ್ಸವವು ಬಸ್ಸು ನಿಲ್ದಾಣದವರೆಗೆ ನಡೆಯಿತು. ರಥೋತ್ಸವದಲ್ಲಿ ಶಿವಮೊಗ್ಗ, ದಕ್ಷಿಣ ಕನ್ನಡ, ಬೆಳಗಾವಿ, ಮಹಾರಾಷ್ಟ ಹಾಗೂ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net