ವಿದ್ಯಾವಂತ ಮಹಿಳೆಯಿಂದ ಪ್ರಗತಿಗೆ ಮುನ್ನುಡಿ

web 5 (1)
Published on

ಚಿಕ್ಕಮಗಳೂರು: ಸಮಾಜದ ಎಲ್ಲ ಕ್ಷೇತ್ರದಲ್ಲೂ ಇಂದು ಮಹಿಳೆ ಅತ್ಯುತ್ತಮ ಸಾಧನೆ ತೋರುತ್ತಿರುವುದು ದೇಶದ ಪ್ರಗತಿಗೆ ಮುನ್ನುಡಿ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಎನ್.ಹೆಗಡೆ ಹೇಳಿದರು.

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ವಾರ್ತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮರ್ಲೆ ಮತ್ತು ಹರಿಹರದಹಳ್ಳಿ ಗ್ರಾಪಂನಿಂದ ಮಾಗಡಿ ಹ್ಯಾಂಡ್​ಪೋಸ್ಟ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳೆ ಅಡುಗೆ ಮನೆಗೆ ಸೀಮಿತಳಲ್ಲ ಎಂಬುದನ್ನು ಸಾಬೀತುಪಡಿಸುತ್ತಿದ್ದಾಳೆ. ಅವರು ವಿದ್ಯಾವಂತರಾಗಿ ಸಮಾಜದಲ್ಲಿ ಒಳ್ಳೆಯ ಸ್ಥಾನ ಪಡೆಯುವಲ್ಲಿ ಪಾಲಕರ ಪಾತ್ರ ಅಪಾರ. ಮಿಲಿಟರಿಯಲ್ಲೂ ವನಿತೆಯರು ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಗೃಹಿಣಿ ಜಯಮಾಲಾ ಮಾತನಾಡಿ, ಹೆಣ್ಣು-ಗಂಡು ಎಂದು ತಾರತಮ್ಯ ಮಾಡಬಾರದು. ಅವರು ಚೆನ್ನಾಗಿ ಓದಿ ಸಮಾಜದಲ್ಲಿ ನಿಲ್ಲುವಂತೆ ಬೆಳೆಸಬೇಕು ಎಂದರು.

ಬಾಲ್ಯವಿವಾಹ ಮತ್ತು ಪೋಕ್ಸೊ ಕಾಯ್ದೆ ಕುರಿತು ವಕೀಲೆ ಡಿ.ಎಸ್.ಮಮತಾ, ಮಕ್ಕಳ ಹಕ್ಕುಗಳು ಮತ್ತು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಕುರಿತು ಎನ್.ಅಪ್ಪು ಉಪನ್ಯಾಸ ನೀಡಿದರು. ತಾಪಂ ಸದಸ್ಯೆ ಪುಷ್ಪಾ ಸೋಮಶೇಖರ್, ಸಿಡಿಪಿಒ ಬಿ.ಎಚ್.ಕೃಷ್ಣಪ್ಪ, ಮರ್ಲೆ ಪಿಡಿಒ ಎಂ.ಬಿ.ಯಮುನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net