ನ್ಯಾ.ಎ.ಜೆ.ಸದಾಶಿವ ವರದಿ ಜಾರಿಗೆ ಆಗ್ರಹ: ಬಳ್ಳಾರಿಯಲ್ಲಿ ಡಾ.ಬಾಬು ಜಗಜೀವನರಾಮ್ ಜನಜಾಗೃತಿ ವೇದಿಕೆ ಪ್ರತಿಭಟನೆ

151220 Ballari Jagajeevan ram Vedike Protest
ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಡಾ.ಬಾಬು ಜಗಜೀವನ್‌ರಾಮ್ ಜನಜಾಗೃತಿ ವೇದಿಕೆ ಮಂಗಳವಾರ ಪ್ರತಿಭಟನೆ ನಡೆಸಿತು.
Published on

ಬಳ್ಳಾರಿ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಡಾ.ಬಾಬು ಜಗಜೀವನರಾಮ್ ಜನಜಾಗೃತಿ ವೇದಿಕೆ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿದರು.

ವೇದಿಕೆ ರಾಜ್ಯಾಧ್ಯಕ್ಷ ಟಿ.ಪಂಪಾಪತಿ ಮಾತನಾಡಿ, ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉಪ ಚುನಾವಣೆ ವೇಳೆ ಭರವಸೆ ನೀಡಿದಂತೆ ಚಳಿಗಾಲದ ಅಧಿವೇಶನದಲ್ಲಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸುಪ್ರೀಂ ನಿರ್ದೇಶನದಂತೆ ಜಾರಿಗೊಳಿಸಬೇಕು. ವಿಎಸ್‌ಕೆ ವಿವಿಯಲ್ಲಿ ಬಾಬು ಜಗಜೀವನರಾವ್ ಸಂಶೋಧನಾ ಅಧ್ಯಯನ ಪೀಠಕ್ಕೆ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು. ನಗರದ ನಲ್ಲಚೆರುವು ಪ್ರದೇಶದಲ್ಲಿ ನನೆಗುದಿಗೆ ಬಿದ್ದಿರುವ ಭವನ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಅಲ್ಲದೆ ಹೊಸಪೇಟೆ ರಸ್ತೆಯ ಉದ್ಯಾನದಲ್ಲಿ ಡಾ.ಬಾಬು ಜಗಜೀವನರಾಮ್ ಪುತ್ಥಳಿ ಸ್ಥಾಪಿಸಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಅಧ್ಯಕ್ಷ ಎಚ್.ರಂಗಪ್ಪ, ಉಪಾಧ್ಯಕ್ಷ ಬಾಬು ಕುರುವಳ್ಳಿ, ಪ್ರದಾನ ಕಾರ್ಯದರ್ಶಿ ಎಚ್.ಭೀಮಲಿಂಗಪ್ಪ, ಮುಖಂಡರಾದ ತಾಯಣ್ಣ ದೊಡ್ಡಮನಿ, ಜೆ.ಸುಂಕಣ್ಣ, ಎಚ್.ಎಸ್.ಗಾದಿಲಿಂಗಪ್ಪ, ಬಿ.ಎಸ್.ಗಂಗಾಧರ, ರಾಮಚಂದ್ರಪ್ಪ, ಎ.ಕೆ. ಮಲ್ಲಿಕಾರ್ಜುನ, ಎ.ಎಂ.ಅನಿಲ್ ಕುಮಾರ್, ಬಿ.ಕೆ.ಮಲ್ಲಿಕಾರ್ಜುನ, ಎಚ್.ಈರಣ್ಣ, ಅರುಣಾಚಲಂ, ಹುಲುಗಪ್ಪ, ವೀರೇಶ್, ಎಚ್.ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net