ಮಾದರಿ ವ್ಯಕ್ತಿತ್ವದ ನ್ಯಾ.ಎನ್.ಕೆ.ಪಾಟೀಲ್

2112Klb01
Published on

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಭಾಲ್ಕಿಯಲ್ಲಿ ಜನಿಸಿ ಕಾಯನಿಷ್ಠೆ, ಸರಳ ವ್ಯಕ್ತಿತ್ವವನ್ನು ರೂಢಿಸಿಕೊಂಡು ಈ ಭಾಗದಲ್ಲಿ ಹೈಕೋರ್ಟ್ ಪೀಠ ಆರಂಭಕ್ಕೆ ನಿರ್ಣಾಯಕ ಪಾತ್ರವನ್ನು ವಹಿಸಿದ್ದ ನ್ಯಾಯಮೂರ್ತಿ ದಿ.ಎನ್.ಕೆ.ಪಾಟೀಲ್ ಅವರ ವ್ಯಕ್ತಿತ್ವ ಯುವ ಪೀಳಿಗೆಗೆ ಸದಾ ಮಾರ್ಗದರ್ಶಿ ಎಂದು ಹೈಕೋಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವರಾಳೆ ಬಣ್ಣಿಸಿದರು.

ನಗರದ ಹೈಕೋರ್ಟ್ ಪೀಠದಲ್ಲಿ ನ್ಯಾಯವಾದಿಗಳ ಸಂಘದಿಂದ ಗುರುವಾರ ಏರ್ಪಡಿಸಿದ್ದ ದಿ.ನ್ಯಾಯಮೂರ್ತಿ ಎನ್.ಕೆ.ಪಾಟೀಲ್ ಅವರ ಭಾವಚಿತ್ರದ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ನ್ಯಾಯವಾದಿ, ನ್ಯಾಯಮೂರ್ತಿ, ವಿವಿಧ ಸಮಿತಿಗಳ ಸದಸ್ಯರಾಗಿ, ಹೈಕೋರ್ಟ್ ಪೀಠ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ, ಸಂವಿಧಾನ ಪೀಠದಲ್ಲಿ ಕಾರ್ಯ ನಿರ್ವಹಿಸಿ ನ್ಯಾಯಾಂಗ ವ್ಯವಸ್ಥೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದರು.
ಶಿಸ್ತುಬದ್ಧ ಕಾರ್ಯದೊಂದಿಗೆ ಜ್ಞಾನಿಗಳಾಗಿ, ಕಾನೂನು ವ್ಯವಸ್ಥೆಯಲ್ಲಿ ಅಘಾದ ಸೇವೆ ಸಲ್ಲಿಸಿರುವ ಅವರು, ಹೊಸ ವಿಷಯಗಳನ್ನು ಅರಿಯುವ ನಿಟ್ಟಿನಲ್ಲಿ ಸದಾ ಉತ್ಸಾಹಿಗಳಾಗಿದ್ದರು. ಕಲ್ಯಾಣ ಕರ್ನಾಟಕ ಭಾಗದ ಬೀದರ್ ಜಿಲ್ಲೆಯ ಪ್ರಥಮ ವ್ಯಕ್ತಿ ಈ ಸ್ಥಾನಕ್ಕೆ ಏರಿದ್ದು, ಐತಿಹಾಸಿಕವಾಗಿದೆ. ವೈಯಕ್ತಿಕ ಏಳಿಗೆಗಿಂತ ಸಮಾಜಕ್ಕೆ ಆದ್ಯತೆ ನೀಡಿ, ಜೀವನದ ಬಹುಪಾಲನ್ನು ನ್ಯಾಯದೇವತೆಯ ಸೇವೆಗೆ ಮೀಸಲಾಗಿಟ್ಟಿದ್ದರು. ಮೌಲ್ಯಗಳನ್ನು ಅರಿತು, ಪ್ರಜಾಸತಾತ್ಮಕ ವ್ಯವಸ್ಥೆಯಲ್ಲಿ ಸಾಗಿದ್ದರು ಎಂದರು.

ಹೈಕೋರ್ಟ್ ನ್ಯಾಯಮೂರ್ತಿಗಳಾದ ಅಶೋಕ ಕಿಣಗಿ, ಆರ್.ದೇವಿದಾಸ, ಕೆ.ನಟರಾಜನ್, ಪ್ರದೀಪಸಿಂಗ್, ಎಂ.ಜಿ.ಉಮಾ, ಸಿಎಂ. ಜೋಶಿ ಬಾರ್ ಅಸೋಸಿಯೇಷನ್ ಅಧ್ಯಕ್ಷ ಗುಪ್ತಲಿಂಗ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಶೋಕ ಮೂಲಗೆ ಎನ್.ಕೆ.ಪಾಟೀಲ್ ಅವರ ಪರಿಚಯ ಮಾಡಿದರು. ಶ್ರವಣಕುಮಾರ ಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net