ನ್ಯಾಯ, ನೀತಿ, ಧರ್ಮದ ಮಾರ್ಗದಲ್ಲಿ ನಡೆಯಿರಿ

06Jaggu7
ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಬೆಳಗಾವಿ ಕಿಲ್ಲಾ ಕೋಟೆಯ ಅಶೋಕ ವೃತ್ತದಲ್ಲಿ ಶ್ರೀಕೃಷ್ಣನ ಭಾವಚಿತ್ರದ ಮೆರವಣಿಗೆಗೆ ಪಾಲಿಕೆ ಮೇಯರ್ ಶೋಭಾ ಸೋಮನಾಚೆ ಡೊಳ್ಳು ಬಾರಿಸಿ ಚಾಲನೆ ನೀಡಿದರು. ಉಪ ಮೇಯರ್ ರೇಷ್ಮಾ ಪಾಟೀಲ, ವಿದ್ಯಾವತಿ ಭಜಂತ್ರಿ ಇತರರಿದ್ದರು.
Published on

ಬೆಳಗಾವಿ: ಶ್ರೀ ಕೃಷ್ಣ ಪರಮಾತ್ಮನ ಸತ್ಯ, ನ್ಯಾಯ, ನೀತಿ ಧರ್ಮದ ಮಾರ್ಗಗಳಲ್ಲಿ ನಾವೆಲ್ಲರೂ ನಡೆಯಬೇಕು. ಅವರ ಧರ್ಮ ನಿಷ್ಠೆ, ಆದರ್ಶ ಪಾಲಿಸಬೇಕು ಎಂದು ಅಪರ ಜಿಲ್ಲಾಕಾರಿ ವಿಜಯಕುಮಾರ ಹೊನಕೇರಿ ಹೇಳಿದರು.

ಜಿಲ್ಲಾಡಳತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೃಷ್ಣ ಜನ್ಮಾಷ್ಟಮಿ ಆಚರಣೆ ಜತೆಗೆ ಕೃಷ್ಣ ಪರಮಾತ್ಮನ ತತ್ತ್ವ, ಸಿದ್ಧಾಂತ ಅಳವಡಿಸಿಕೊಂಡು ಪರಸ್ಪರ ಪ್ರೀತಿ, ವಿಶ್ವಾಸ, ಶಾಂತಿ, ಸುವ್ಯವಸ್ಥೆ ಕಾಪಾಡೋಣ ಎಂದರು. ಪ್ರೋಬೆಷನರಿ ಐ.ಎ.ಎಸ್. ಅಕಾರಿ ಶುಭಂ ಶುಕ್ಲಾ ಮಾತನಾಡಿ, ಶ್ರೀಕೃಷ್ಣ ಪರಮಾತ್ಮರನ್ನು ಇಡೀ ದೇಶ ಪೂಜಿಸುತ್ತದೆ. ಧರ್ಮದ ಮಾರ್ಗದಲ್ಲಿ ನಡೆಯುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದರು.

ವಿಶೇಷ ಉಪನ್ಯಾಸ ನೀಡಿದ ರವಿ ಶಾಸಿ, ಪುರಾತನ ಕಾಲದಲ್ಲಿ ಯಾದವ ಸಮುದಾಯಕ್ಕೆ ಹೆಚ್ಚಿನ ವಿದ್ಯಾಭ್ಯಾಸ ಇರಲಿಲ್ಲ. ಆದರೂ ಸಮಾಜದ ಎಲ್ಲ ಜನರನ್ನು ಪ್ರೀತಿ, ವಿಶ್ವಾಸ, ಸರಳ ಸಜ್ಜನಿಕೆಯಿಂದ ಅವರು ಕಾಣುತ್ತಿದ್ದರು. ಜಾನುವಾರುಗಳ ಪಾಲನೆ-ಪೋಷಣೆ ಮಾಡುವ ಜತೆಗೆ ಹೈನುಗಾರಿಕೆ ಮೂಲಕ ಆರ್ಥಿಕ ಸ್ಥಿತಿ-ಗತಿ ಅಭಿವೃದ್ಧಿ ಪಡಿಸಿಕೊಂಡ ಬಂದಿರುವ ಸಮುದಾಯ ಎಂದರು.


ಜಿಪಂ ಸದಸ್ಯ ಮಂಜುನಾಥ ಪಾಟೀಲ, ಕೃಷ್ಣಕುಮಾರ ಅಜ್ಜನ್ನವರ, ಯಾದವ ಸಮುದಾಯದ ಜಿಲ್ಲಾಧ್ಯಕ್ಷ ಶೀತಲ ಮುಂಡೆ, ಗೌರವಾಧ್ಯಕ್ಷ ಜೈಗೌಡ ಪಾಟೀಲ, ಉಪಾಧ್ಯಕ್ಷ ಎನ್.ಎನ್. ಪಾಟೀಲ, ಹೆಸ್ಕಾಂ ಅಕಾರಿ ಸಂಜೀವ ಹಮ್ಮನವರ, ನಗರ ಸೇವಕ ಬಸವರಾಜ ಮುದ್ದೆಕರ, ಘಟಪ್ರಭಾ ಸಕ್ಕರೆ ಕಾರ್ಖಾನೆ ನಿರ್ದೇಶಕ ಶಿವಲಿಂಗ ಪೂಜಾರ ಇತರಿದ್ದರು. ಇದಕ್ಕೂ ಮುಂಚೆ ಶ್ರೀಕೃಷ್ಣನ ಭಾವಚಿತ್ರದ ಭವ್ಯ ಮೆರವಣಿಗೆಗೆ ಪಾಲಿಕೆ ಮೇಯರ್ ಶೋಭಾ ಸೋಮನಾಚೆ ಚಾಲನೆ ನೀಡಿದರು. ಕಿಲ್ಲಾ ಕೋಟೆಯ ಅಶೋಕ ವೃತ್ತದಿಂದ ಮೆರವಣಿಗೆಯು ಆರ್.ಟಿ.ಒ ವೃತ್ತದ ಮಾರ್ಗವಾಗಿ ಕುಮಾರ ಗಂಧರ್ವ ಕಲಾ ಮಂದಿರ ತಲುಪಿತು. ಉಪ ಮೇಯರ್ ರೇಷ್ಮಾ ಪಾಟೀಲ, ವಿದ್ಯಾವತಿ ಭಜಂತ್ರಿ, ಸಮುದಾಯ ಮುಖಂಡರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net