

ಕಾಗವಾಡ: ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ಮೇಲೆ ಶೂ ಎಸೆಯಲು ಪ್ರಯತ್ನಿಸಿದ ವಕೀಲ ರಾಜೇಶ ಕಿಶೋರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸೋಮವಾರ ವಿವಿಧ ದಲಿತ ಸಂಘಟನೆಗಳು ಮತ್ತು ವಕೀಲರು ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ದಲಿತ ಮುಖಂಡ ಸಂಜಯ ತಳವಳಕರ ಮಾತನಾಡಿ, ನ್ಯಾಯಾಂಗದ ಪಾವಿತ್ರ್ಯ ಹಾಳು ಮಾಡುವ ಯತ್ನವಾಗಿದೆ. ಇಂತಹ ದುಷ್ಟ ವ್ಯಕ್ತಿಗಳ ವಿರುದ್ಧ ದೇಶದ್ರೋಹದ ದೂರು ದಾಖಲಿಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಅಲ್ಲದೆ, ಗ್ವಾಲಿಯರದ ವಕೀಲ ಅನಿಲ ಮಿಶ್ರಾ ಡಾ.ಅಂಬೇಡ್ಕರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರವಾಸಿ ಮಂದಿರದಿಂದ ತಹಸೀಲ್ದಾರ್ ಕಚೇರಿವರೆಗೆ ಬೃಹತ್ ಪ್ರತಿಭಟನೆ ನಡೆಸಿದರು.
ವಕೀಲರಾದ ಸಚಿನ ವಾಘಮೋರೆ, ನಿತಿನ ಪಟ್ಟಣ, ಉಮೇಶ ಮನೋಜೆ, ಶಶಿಕಾಂತ ನಿಡೋಣಿ, ದಯಾನಂದ ಭಂಡಾರೆ, ವಿದ್ಯಾಧರ ಧೊಂಡಾರೆ ಮಾತನಾಡಿದರು. ಪ್ರಕಾಶ ಧೊಂಡಾರೆ, ದಯಾನಂದ ಭಂಡಾರೆ, ಮಹಾಂತೇಶ ಬಡಿಗೇರ, ಮೀರಾ ಕಾಂಬಳೆ, ಉದಯ ಖೋಡೆ, ರವಿ ಕುರಣೆ, ವಿಶಾಲ ಧೊಂಡಾರೆ, ರವಿ ಕಾಂಬಳೆ, ವಿಜಯ ಅಸೋದೆ, ಪ್ರಕಾಶ ಕಾಂಬಳೆ, ಪ್ರಸಾದ ಶಿಂಗೆ, ಪ್ರಕಾಶ ಕಾಂಬಳೆ, ಶೇಖರ ಕುರಾಡೆ ಇತರರಿದ್ದರು.