ಸಿದ್ಧಾರೂಢ ಮಠಕ್ಕೆ ನ್ಯಾಯಾಧೀಶರ ಭೇಟಿ

IMG_20240731_210127_505.jpg
Published on

ಹುಬ್ಬಳ್ಳಿ: ಇಲ್ಲಿಯ ಸಿದ್ಧಾರೂಢ ಸ್ವಾಮಿ ಮಠಕ್ಕೆ ಕರ್ನಾಟಕ ಹಸಿರು ನ್ಯಾಯಾಧೀಕರಣ ಅಧ್ಯಕ್ಷರಾದ ಸುಭಾಸ ಆಡಿ ಅವರು ಬುಧವಾರ ಭೇಟಿ ನೀಡಿದರು.

ಉಭಯ ಶ್ರೀಗಳ ಗದ್ದುಗೆ ದರ್ಶನ ಪಡೆದರು. ಸಿದ್ಧಾರೂಢರ ಉದ್ಯಾನದಲ್ಲಿ ಸಂಪಿಗೆ ಸಸಿ ನೆಟ್ಟರು.

ಶ್ರೀಮಠದ ವತಿಯಿಂದ ನ್ಯಾಯಾಧೀಶರನ್ನು ಗೌರವಿಸಲಾಯಿತು. ಧರ್ಮದರ್ಶಿಗಳಾದ ಡಾ. ಗೋವಿಂದ ಮಣ್ಣೂರ, ಬಾಳು ಮಗಜಿಕೊಂಡಿ, ಉದಯಕುಮಾರ ನಾಯ್ಕ, ವಿನಾಯಕ ಘೋಡ್ಕೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net