ಎರಡೇ ವರ್ಷದಲ್ಲಿ ಕಿತ್ತು ಹೋದ ಡಾಂಬರ್

4 HATTI 01
ಕೋಠಾ ಗ್ರಾಮದಿಂದ ಗುರುಗುಂಟಾ ಶ್ರೀ ಅಮರೇಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆಯ ಡಾಂಬರ್ ಕಿತ್ತುಹೋಗಿರುವುದು.
Published on

ಹಟ್ಟಿಚಿನ್ನದಗಣಿ: ಸಮೀಪದ ಕೋಠಾ ಗ್ರಾಮದಿಂದ ಗುರುಗುಂಟಾ ಪ್ರಸಿದ್ಧ ಅಮರೇಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆ ಹದಗೆಟ್ಟಿದ್ದು, ಎರಡು ವರ್ಷದ ಹಿಂದೆ ರಸ್ತೆಗೆ ಹಾಕಲಾಗಿದ್ದ ಡಾಂಬರ್ ಸಂಪೂರ್ಣ ಕಿತ್ತುಹೋಗಿದೆ.

ಹೋಳಿ ಹುಣ್ಣಿಮೆಯಂದು ನಡೆಯುವ ಶ್ರೀ ಅಮರೇಶ್ವರ ದೇವಸ್ಥಾನ ಜಾತ್ರೆಗೆ ಹಟ್ಟಿ, ಆನ್ವರಿ, ಚಿಕ್ಕನಗನೂರು, ಗೆಜ್ಜಲಗಟ್ಟಾ, ರೋಡಲಬಂಡಾ, ನಿಲೋಗಲ್, ಪಾಮನಕಲ್ಲೂರು, ಕವಿತಾಳ ಸೇರಿದಂತೆ ಹತ್ತಾರು ಹಳ್ಳಿಗಳಿಂದ ಬರುವ ಭಕ್ತರು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಜಾತ್ರೆಗೆ ಆಗಮಿಸುವ ಭಕ್ತರು ಮೈಯೆಲ್ಲಾ ಕಣ್ಣಾಗಿಸಿಕೊಂಡೇ ವಾಹನ ಚಲಾಯಿಸಬೇಕು. ಯಾಮಾರಿದರೆ ಅಪಾಯ ಎದುರಾಗುವುದು ನಿಶ್ಚಿತ.

ಗುಂಡಿಗಳು ಬಿದ್ದ ರಸ್ತೆಯಲ್ಲಿ ಅಪಘಾತಗಳು ಸರ್ವೇ ಸಾಮಾನ್ಯವಾಗಿವೆ. ಇದರ ಅರಿವಿದ್ದರೂ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಮಕ್ಕಳು, ಮಹಿಳೆಯರು, ವೃದ್ಧರು ಈ ಮಾರ್ಗದಲ್ಲಿ ತಿರುಗಾಡಲು ಭಯಪಡುವಂತಾಗಿದೆ.

ಅಧಿಕಾರಿಗಳು, ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಕೇವಲ ಎರಡೇ ವರ್ಷದಲ್ಲಿ ರಸ್ತೆ ಡಾಂಬರ್ ಕಿತ್ತುಹೊಗಿದೆ. ಶ್ರೀ ಅಮರೇಶ್ವರ ದೇವಸ್ಥಾನಕ್ಕೆ ತೆರಳುವ ಮಾರ್ಗವನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವುಮಾಡಿಕೊಡಬೇಕು. ಬಸವರಾಜ ಮಿಯ್ಯಪುರ ಕೋಠಾ ಗ್ರಾಮಸ್ಥ ಕೋಠಾ ಗ್ರಾಮದಿಂದ ಗುರುಗುಂಟಾ ಅಮರೇಶ್ವರ ದೇವಸ್ಥಾನಕ್ಕೆ ತೆರಳುವ ರಸೆಯಲ್ಲಿ ತಗ್ಗು-ಗುಂಡಿಗಳು ಬಿದ್ದಿರುವುದು ನನ್ನ ಗಮನಕ್ಕಿದೆ. ಇಲಾಖೆಯಲ್ಲಿ ಸದ್ಯ ಯಾವುದೇ ಅನುದಾನವಿಲ್ಲ. ಮುಂದಿನ ದಿನಗಳಲ್ಲಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ಹನುಮಪ್ಪ ಆದ್ವಾನಿ ಎಇಇ, ಉಪವಿಭಾಗ ಜಿಪಂ, ಲಿಂಗಸುಗೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net