9ಕ್ಕೆ ರಾಜ್ಯಾದ್ಯಂತ ಜಸ್ಟ್ ಪಾಸ್ ಬಿಡುಗಡೆ

IMG_20240203_124440_536.jpg
Published on

ಹುಬ್ಬಳ್ಳಿ: ಕೆ.ಎಂ. ರಘು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ "ಜಸ್ಟ್ ಪಾಸ್' ಕನ್ನಡ ಚಲನಚಿತ್ರವು ಫೆ. 9ರಂದು ರಾಜ್ಯಾದ್ಯಂತ 120ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಾಯಕ ನಟ ಶ್ರೀ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಅನೇಕ ಕಾಲೇಜುಗಗಳಲ್ಲಿ ಪ್ರವೇಶ ದೊರೆಯುತ್ತದೆ. ಆದರೆ, ಶೇ. 35 ಅಂಕ ಪಡೆದು ಜಸ್ಟ್ ಪಾಸ್ ಆದವರ ಕಥೆ ಏನು? ಎಂಬುದನ್ನು ಯಾರೂ ಹೇಳುವುದಿಲ್ಲ. ಹಾಗಾಗಿ ಚಿತ್ರದಲ್ಲಿ ಜಸ್ಟ್ ಪಾಸ್ ಆದವರಿಗೂ ನಾನಾ ದಾರಿಗಳಿವೆ. ಪ್ರತಿಯೊಬ್ಬರಲ್ಲಿಯೂ ಒಂದೊಂದು ಪ್ರತಿಭೆ ಇರುತ್ತದೆ ಎಂಬುದನ್ನು ತೋರಿಸಲು ಚಿತ್ರ ಮಾಡಲಾಗಿದೆ ಎಂದರು.

ಹಾಸ್ಯನಟ ರಂಗಾಯನ ರಘು ಅವರು ಇದೇ ಮೊದಲ ಬಾರಿ ಕಾಲೇಜಿನ ಪ್ರಾಚಾರ್ಯರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತರಲೆ ಹಾಗೂ ತಲೆಹರಟೆ ಹುಡುಗರನ್ನು ತಿದ್ದಿ, ತೀಡಿ ಸಮಾಜದಲ್ಲಿ ಹೇಗೆ ಮಾದರಿ ವ್ಯಕ್ತಿಯನ್ನಾಗಿಸುತ್ತಾರೆ ಎಂಬುದು ಚಿತ್ರದ ಸಾರಾಂಶ ಎಂದು ಶ್ರೀ ತಿಳಿಸಿದರು.

ಚಿತ್ರದ ನಾಯಕಿಯಾಗಿ ಪ್ರಣತಿ, ಹಾಸ್ಯನಟ ಸಾಧು ಕೋಕಿಲ, ಕಾಂತಾರ ಖ್ಯಾತಿಯ ಪ್ರಕಾಶ್ ತಮಿಳುನಾಡು, ದೀಪಕ್ ರೈ, ಗೋವಿಂದಗೌಡ ಸೇರಿ ಅನೇಕ ಕಲಾವಿದರು ಅಭಿನಯಿಸಿದ್ದಾರೆ.
ಒಟ್ಟು ನಾಲ್ಕು ಹಾಡುಗಳಿದ್ದು, ಹರ್ಷವರ್ಧನರಾಜ್ ಅವರ ಸಂಗೀತವಿದೆ. ಮೈಸೂರ ಮತ್ತು ಗುಜರಾತ್ನಲ್ಲಿ 65 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ರಾಯ್ಸ್ ಎಂಟರ್ಟೇನ್ಮೆಂಟ್ ಲಾಂಭನದಲ್ಲಿ ಕೆ.ವಿ. ಶಶಿಧರ ಅವರು ನಿಮಿರ್ಸಿದ ಚಿತ್ರವು ಕುಟುಂಬ ಸಮೇತರಾಗಿ ನೋಡುವಂತಹದಾಗಿದೆ ಎಂದರು.

ಗೋಷ್ಠಿಯಲ್ಲಿ ನಟಿ ಪ್ರಣತಿ, ನಟರಾದ ನಿಖಿಲ್ ಗೌಡ, ಚಂದುಶ್ರೀ, ಅಪಿರ್ತಾ, ವಿಶ್ವಾಸ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net