ಕೇವಲ ಅಧಿಕಾರಕ್ಕಾಗಿ ಸೇವೆ ಸಲ್ಲದು

Mariyammanahalli mla
ಮರಿಯಮ್ಮನಹಳ್ಳಿ ಸಮೀಪದ ಜಿ.ನಾಗಲಾಪುರ ಮಠಕ್ಕೆ ಶುಕ್ರವಾರ ಭೇಟಿ ನೀಡಿದ್ದ ಸಂಡೂರು ಶಾಸಕ ಈ.ತುಕಾರಾಮ್ ಅವರನ್ನು ಶ್ರೀ ನಿರಂಜನ ಪ್ರಭು ದೇಶಿಕರು ಸನ್ಮಾನಿಸಿದರು. ಪ್ರಮುಖರಾದ ಎಚ್.ಎಂ.ಚಂದ್ರಶೇಖರಯ್ಯ, ಒಂಟಿ ಶಿವ ಪ್ರಕಾಶ, ಟಿ.ಸೋಮಶೇಖರ್, ಬಿ.ಪರಶುರಾಮ ಇತರರಿದ್ದರು.
Published on

ಮರಿಯಮ್ಮನಹಳ್ಳಿ: ಸಾರ್ವಜನಿಕ ಜೀವನದಲ್ಲಿ ಮಾಡುವ ಕೆಲಸಗಳು ಶಾಶ್ವತವಾಗಿ ಉಳಿಯುವಂತವಾಗಬೇಕು. ಕೇವಲ ರಾಜಕೀಯ ಅಧಿಕಾರಕ್ಕಾಗಿ ಸೇವೆ ಮಾಡಬಾರದು ಎಂದು ಶಾಸಕ ಈ.ತುಕರಾಮ್ ಹೇಳಿದರು.

ಜಿ.ನಾಗಲಾಪುರ ಗ್ರಾಮದ ಶ್ರೀಗುರು ಒಪ್ಪತ್ತೇಶ್ವರ ಮಠಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು.

ಗ್ರಾಮೀಣ ಭಾಗದ ಅಭಿವೃದ್ಧಿ ಗೆ ಜನಪ್ರತಿನಿಧಿಗಳು ಆದ್ಯತೆ ನೀಡಬೇಕು. ಇದರಿಂದ ಹಳ್ಳಿಗಳು ಸರ್ವತೋಮುಖ ಬೆಳವಣಿಗೆ ಕಾಣಲು ಸಾಧ್ಯ. ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ಮಠ ಮಾನ್ಯಗಳ ಬೆಳೆಸುವ ಕೆಲಸ ಎಲ್ಲರೂ ಮಾಡಬೇಕು. ಮಾರ್ಚ್‌ನಲ್ಲಿ ನಡೆಯುವ ಶ್ರೀಮಠದ ನೂತನ ಪಟ್ಟಾಧಿಕಾರ ಕಾರ್ಯಕ್ರಮಕ್ಕೆ 20 ಲಕ್ಷ ರೂ. ನೀಡಲಾಗುವುದು. ಜನರ ಸೇವೆ ಮಾಡುವ ಋಣ ಇದ್ದರೆ ಎಲ್ಲಿದ್ದರೂ ದೊರೆಯುತ್ತದೆ. ಇಂತಹ ವಿರಕ್ತ ಮಠಗಳನ್ನು ಬೆಳೆಸುವುದರಿಂದ ಒಳಿತಾಗುತ್ತದೆ ಎಂದರು.

ಶ್ರೀ ಮಠದ ಶ್ರೀ ನಿರಂಜನ ಪ್ರಭು ದೇಶಿಕರು ಮಾತನಾಡಿ, ಜನರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಸಾಮಾಜಿಕ ಪ್ರಗತಿ ಸಾಧಿಸುವವವೇ ನಿಜವಾದ ಜನ ನಾಯಕ ಎಂದರು. ಪ್ರಮುಖರಾದ ಎಚ್.ಎಂ.ಚಂದ್ರಶೇಖರಯ್ಯ, ಒಂಟಿ ಶಿವ ಪ್ರಕಾಶ, ಟಿ.ಸೋಮಶೇಖರ್, ಬಿ.ಪರಶುರಾಮ, ಜಿ.ಚಂದ್ರಶೇಖರ್, ಜಿ.ಸೊಮಣ್ಣ, ಹುಲುಮನಿ ಕೊಟ್ರೇಶ್, ಅಣ್ಣಿ ಪಂಪಾಪತಿ, ಮ್ಯಾದರ್ ಮಂಜುನಾಥ, ಎಚ್.ಎಂ.ಶಿವಶಂಕ್ರಯ್ಯ, ಅಂಜಿನಪ್ಪ, ಹನುಮಂತಮ್ಮ, ಕೆ.ಹನುಮಂತ, ಸೋಮಣ್ಣ, ಜಾತಪ್ಪ, ಕಣಿವೆಪ್ಪ, ಕೆ.ಲಕ್ಷ್ಮಣ್, ಈ.ರಮೇಶ್, ಡಿ.ಗಜೇಂದ್ರ, ಷಣ್ಮುಖ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net