ಸುಮ್ಮನೆ ಟೀಕಿಸುವುದು ಬಿಜೆಪಿಗಿರುವ ರೋಗ

madhu bangarappa
ಸಚಿವ ಮಧು ಬಂಗಾರಪ್ಪ
Published on

ಶಿವಮೊಗ್ಗ: ಸೋತಿರುವವರಿಗೆ ಟೀಕೆ, ಟಿಪ್ಪಣಿ ಮಾಡುವುದರ ಹೊರತು ಬೇರೆ ಕೆಲಸವಿಲ್ಲ. ಬಿಜೆಪಿಯವರು ಸುಮ್ಮನೆ ಟೀಕೆ ಮಾಡುತ್ತಾರೆ. ಅದು ಒಂದು ಬಗೆಯ ರೋಗ ಎಂದು ಸಚಿವ ಮಧು ಬಂಗಾರಪ್ಪ ಕಿಡಿಕಾರಿದರು.

ಸರ್ಕಾರದ ವಿರುದ್ಧ ಬಿಜೆಪಿ ಚಾರ್ಜ್ ಶೀಟ್ ಬಿಡುಗಡೆ ಕುರಿತು ಬುಧವಾರ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ನಾಯಕರನ್ನು ಅವರ ಪ್ರಧಾನಿ ನರೇಂದ್ರ ಮೋದಿ ಅವರೇ ಯಾವ ಸ್ಥಾನದಲ್ಲಿ ನಿಲ್ಲಿಸಿದ್ದರು ಎಂಬುದನ್ನೂ ನೋಡಿದ್ದೇವೆ ಎಂದು ತಿರುಗೇಟು ನೀಡಿದರು.
ಗ್ಯಾಸ್ ಸಿಲಿಂಡರ್ ದರ ಕಡಿಮೆ ವಿಚಾರ ಮಾಡಿದ್ದು ಉಚಿತವಾಗಿ ಕೊಡುತ್ತೇವೆ ಎಂದವರು ಈಗ 200 ರೂ. ಕಡಿಮೆ ಮಾಡಿದ್ದಾರೆ. ಪುಗ್ಸಟ್ಟೆ ಕೊಡುತ್ತೇವೆ ಎಂದು ಹೇಳಿದ ಮಾತನ್ನು ಅವರು ಉಳಿಸಿಕೊಳ್ಳಲಿ. ಉಚಿತವಾಗಿ ಸಿಲಿಂಡರ್‌ಗಳನ್ನು ಕೊಟ್ಟರೆ ನಾನೇ ಹೋಗಿ ಹಾರ ಹಾಕಿ, ಸನ್ಮಾನ ಮಾಡುತ್ತೇನೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net