ಬೆಳಕಿನತ್ತ ಕೊಂಡೊಯ್ಯಲಿದೆ ಗುರುವಿನ ಶಕ್ತಿ

9 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಪಂ. ಬಸವರಾಜ ರಾಜಗುರು ಎಂದರೆ ಸಂಗೀತ ಶ್ರೀಮಂತಿಕೆ. ರಾಜಗುರು ತಮ್ಮ ಅನೇಕ ಶಿಷ್ಯರ ಬಾಳಿಗೆ ಬೆಳಕಾಗಿದ್ದರು ಎಂದು ಉದಾತ್ತ ಕಲಾ ಅಕಾಡೆಮಿ ಗೌರವ ನಿರ್ದೇಶಕ ಶಾಂತಾರಾಮ ಹೆಗಡೆ ಹೇಳಿದರು.
ನಗರದ ಆಲೂರು ವೆಂಕಟರಾವ್ ಭವನದಲ್ಲಿ ಉದಾತ್ತ ಕಲಾ ಅಕಾಡೆಮಿ, ಕುಮಾರೇಶ್ವರ ಕಲ್ಚರಲ್ ಸೊಸೈಟಿ ಹಾಗೂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಬಸವರಾಜ ರಾಜಗುರು ಸಂಗೀತೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗುರುವಿನ ಶಕ್ತಿ ನಿರಂತರ ಬೆಳಕಿನೆಡೆಗೆ ಕರೆದೊಯ್ಯುತ್ತದೆ. ಅದೇ ರೀತಿ ಪಂ. ಬಸವರಾಜ ರಾಜಗುರು ತೋರಿದ ಹಾದಿಯಲ್ಲಿ ಸಾಗುತ್ತಿರುವ ಅವರ ಶಿಷ್ಯರು ವಿಶೇಷ ಸಾಧನೆ ಮಾಡಿ ಗುರುಗಳ ಕೀರ್ತಿ ವೃದ್ಧಿಯಲ್ಲಿ ತೊಡಗಿದ್ದಾರೆ ಎಂದರು.
ಆಕಾಶವಾಣಿ ನಿವೃತ್ತ ಉದ್ಘೋಷಕ ಡಾ.ಶಶಿಧರ ನರೇಂದ್ರ ಮಾತನಾಡಿ, ಬಸವರಾಜ ರಾಜಗುರು, ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ ಮನಸೂರ ಅವರು ತಮ್ಮ ಸಂಗೀತ ಸಾಧನೆ ಮೂಲಕ ಧಾರವಾಡಕ್ಕೆ ಹೆಮ್ಮೆ ತಂದಿದ್ದಾರೆ. ಇದೇ ಕಾರಣಕ್ಕೆ ಮೊದಲ ಕೇಂದ್ರ ಪ್ರಸಾರ ಖಾತೆ ಸಚಿವರಾಗಿದ್ದ ರಂಗರಾವ್ ಧಾರವಾಡದಲ್ಲಿ ಆಕಾಶವಾಣಿ ಕೇಂದ್ರ ಆರಂಭಿಸಲು ಪ್ರೇರಣೆಯಾಯಿತು ಎಂದರು.
ಪA. ಬಸವರಾಜ ರಾಜಗುರು ರಾಷ್ಟಿಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಚಂದ್ರಕಾAತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಭಾರತೀದೇವಿ ರಾಜಗುರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಕುಮಾರೇಶ್ವರ ಕಲ್ಚರಲ್ ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ, ನಿಜಗುಣ ರಾಜಗುರು, ಪಂ.ಶ್ರೀಪಾದ ಹೆಗಡೆ, ಡಾ.ಅಶೋಕ ಹುಗ್ಗಣ್ಣವರ, ವೀರಣ್ಣ ಪತ್ತಾರ, ಶಂಕರ ಕುಂಬಿ, ವೇಣುಗೋಪಾಲ ಜೋಶಿ, ಎಂ.ವಿ.ಹೊಸಮನಿ, ಎಸ್.ಎಸ್.ಬಂಗಾರಿಮಠ, ಕೆ.ಎಚ್.ನಾಯಕ್, ಡಾ.ಎ.ಎಲ್.ದೇಸಾಯಿ, ಸುರೇಖಾ ಸುರೇಶ, ಇತರರು ಇದ್ದರು.
ವಿವೇಕ ಹೆಗಡೆ, ಪಂ.ಪರಮೇಶ್ವರ ಹೆಗಡೆ ಗಾಯನ ಪ್ರಸ್ತುತ ಪಡಿಸಿದರು. ಯುವ ಕಲಾವಿದ ಸೃಷ್ಟಿ ಸುರೇಶ ಸಿತಾರ ವಾದನ ಪ್ರಸ್ತುತ ಪಡಿಸಿದರು. ತಬಲಾದಲ್ಲಿ ಗೋಪಾಲಕೃಷ್ಣ ಹೆಗಡೆ, ಅಲ್ಲಮಪ್ರಭು ಕಡಕೋಳ ಹಾಗೂ ಸತೀಶ ಭಟ್ ಹೆಗ್ಗಾರ ಹಾರ್ಮೋನಿಯಂ ಸಾಥ್ ನೀಡಿದರು.
ರವಿ ಕುಲಕರ್ಣಿ ನಿರೂಪಿಸಿದರು. ಪ್ರಕಾಶ ಬಾಳಿಕಾಯಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net