

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಸವದತ್ತಿ ರಸ್ತೆಯ ಮೃತ್ಯುಂಜಯ ನಗರದ ಜೆಎಸ್ಎಸ್ನ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜು. 18ರಂದು ಸಂಜೆ 6.30ಕ್ಕೆ ಗುರು ರ್ಪೂಣಿಮೆ ನಿಮಿತ್ತ ಗುರು ಆರಾಧನೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಉದ್ಘಾಟಕರಾಗಿ ಎಸ್ಡಿಎಂ ಕಾರ್ಯದರ್ಶಿ ಜೀವಂಧರಕುಮಾರ ಆಗಮಿಸುವರು. ಅತಿಥಿಯಾಗಿ ಜೆಎಸ್ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಆಗಮಿಸುವರು. ಪ್ರಾಚಾರ್ಯೆ ತ್ರಿವೇಣಿ ಆರ್. ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.