ಜೂನಿಯರ್ ರೆಡ್‌ಕ್ರಾಸ್ ಘಟಕ ಉದ್ಘಾಟನೆ

redcross
ಕುಂದಾಪುರ ರೆಡ್‌ಕ್ರಾಸ್ ಟಕದ ಸಭಾಪತಿ ಜಯಕರ ಶೆಟ್ಟಿ ಉದ್ಘಾಟಿಸಿದರು.
Published on

ಕುಂದಾಪುರ: ಕುಂದಾಪುರ ರೆಡ್‌ಕ್ರಾಸ್ ಟಕದ ಅಂಗಸಂಸ್ಥೆಯಾದ ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಜೂನಿಯರ್ ರೆಡ್‌ಕ್ರಾಸ್ ಟಕವನ್ನು ಕುಂದಾಪುರ ರೆಡ್‌ಕ್ರಾಸ್ ಘಟಕದ ಸಭಾಪತಿ ಜಯಕರ ಶೆಟ್ಟಿ ಸೋಮವಾರ ಉದ್ಘಾಟಿಸಿದರು.

ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ. ಅಧ್ಯಕ್ಷತೆ ವಹಿಸಿದ್ದರು. ರೆಡ್‌ಕ್ರಾಸ್ ಸಂಚಾಲಕ ದಿನಕರ ಶೆಟ್ಟಿ ರೆಡ್‌ಕ್ರಾಸ್ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಜೂನಿಯರ್ ರೆಡ್‌ಕ್ರಾಸ್‌ನ ಪ್ರಸಕ್ತ ಸಾಲಿನ ಅಧ್ಯಕ್ಷೆಯಾಗಿ ವಿದ್ಯಾರ್ಥಿನಿ ಅಮೂಲ್ಯ ಹಾಗೂ ಕಾರ್ಯದರ್ಶಿಯಾಗಿ ಆಯ್ಕೆಯಾದ ವಿದ್ಯಾರ್ಥಿ ಗಗನ್ ಹೆಬ್ಬಾರ್ ಅವರಿಗೆ ಜಯಕರ ಶೆಟ್ಟಿ ಅಧಿಕಾರ ಹಸ್ತಾಂತರಿಸಿದರು.

2024-25ನೇ ಸಾಲಿನಲ್ಲಿ ರೆಡ್‌ಕ್ರಾಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಗತಿ ಪತ್ರ ನೀಡಲಾಯಿತು.

ಜೂನಿಯರ್ ರೆಡ್‌ಕ್ರಾಸ್ ಸಂಚಾಲಕ ರಾಜೇಶ್ ಹೆಬ್ಬಾರ್ ಸ್ವಾಗತಿಸಿದರು. ಮಾಜಿ ಸಂಚಾಲಕ ಶಂಕರ ನಾಯ್ಕ ವಂದಿಸಿದರು. ಉಪನ್ಯಾಸಕ ಕಾಳಾವರ ಉದಯಕುವಾರ ಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net