ಕೊಪ್ಪ ಸುತ್ತಮುತ್ತ ಕಾಡಾನೆ ರೌಂಡ್ಸ್

29 kpp 10
Published on

ಕೊಪ್ಪ: ಪಟ್ಟಣಕ್ಕೆ ಹೊಂದಿಕೊಂಡಿರುವ ಹಂದಿಗೋಡು, ಚಿಟ್ಟೆಮಕ್ಕಿ, ಹೊಕ್ಕಳಿಕೆ, ಬಾಳಗಡಿ, ಬಿಂತ್ರವಳ್ಳಿ ಭಾಗದ ಅಡಕೆ ತೋಟ, ಭತ್ತದ ಗದ್ದೆಗಳಲ್ಲಿ ಕಾಡಾನೆ ಹೆಜ್ಜೆ ಗುರುತುಗಳು, ಆನೆ ಲದ್ದಿಗಳು ಕಂಡಿದೆ.

ಕೊಪ್ಪ ಪಟ್ಟಣ ಸುತ್ತಮುತ್ತ ಇದೇ ಮೊದಲ ಬಾರಿಗೆ ಕಾಡಾನೆಗಳು ಕಾಣಿಸಿಕೊಂಡಿದ್ದು, ಪಟ್ಟಣದ ವಾಸಿಗಳು ಹಾಗೂ ಆಸುಪಾಸಿನ ಜನರು ರೈತರಲ್ಲಿ ಆತಂಕ ಮೂಡಿಸಿದೆ. ಮೂರು ಕಾಡಾನೆಗಳು ಬಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಅರಣ್ಯ ಇಲಾಖೆಯವರು ಕೂಡಲೇ ಎಚ್ಚೆತ್ತು, ಕಾಡಾನೆಗಳನ್ನು ಬೇರೆಡೆ ಸ್ಥಳಾಂತರ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕಾಡಾನೆಗಳು ಗದ್ದೆಗೆ ಬಂದು ಹೋಗಿರುವುದು ಆತಂಕ ಮೂಡಿಸಿದೆ. ನಮ್ಮ ಗದ್ದೆಯಲ್ಲಿ ಕಾಡಾನೆ ಹೆಜ್ಜೆ ಗುರುತು ಇದೆ. ರಾತ್ರಿ ಓಡಾಡಲು ಭಯವಾಗುತ್ತದೆ. ಹಾಗೂ ಬೆಳೆಗಳನ್ನು ಉಳಿಸಿಕೊಳ್ಳುವುದು ಸವಾಲಿನ ಪ್ರಶ್ನೆಯಾಗಿದೆ ಎಂದು ದೇವದತ್ತ ಹಂದಿಗೋಡು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net