ಜಂಬೂ ಸವಾರಿ ಇಂದು

22 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಜಂಬೂ ಸವಾರಿ ಉತ್ಸವ ಸಮಿತಿ ವತಿಯಿಂದ ನಗರದಲ್ಲಿ ಅ. 23ರಂದು ಸರಳ ದಸರಾ ಜಂಬೂ ಸವಾರಿ ಏರ್ಪಡಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಗುರುರಾಜ ಹುಣಸಿಮರದ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಂಧಿನಗರದ ಈಶ್ವರ ದೇವಸ್ಥಾನದಲ್ಲಿ ನವರಾತ್ರಿ ನಿಮಿತ್ತ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪಿಸಿದ್ದು, ನಿತ್ಯ ಪೂಜೆ, ಅಲಂಕಾರ, ವಿವಿಧ ಕಾರ್ಯಕ್ರಮ ಜರಗುತ್ತಿವೆ. ಅ. 23ರ ಮಧ್ಯಾಹ್ನ 1ಕ್ಕೆ ಬಂಡೆಮ್ಮ ದೇವಸ್ಥಾನದಲ್ಲಿ ಅಂಬಾರಿ ಪೂಜೆ ಮುಗಿದ ಬಳಿಕ ಗಾಂಧಿನಗರದ ಈಶ್ವರ ದೇವಸ್ಥಾನದಲ್ಲಿ ಮೆರವಣಿಗೆಗೆ ಚಾಲನೆ ದೊರೆಯಲಿದೆ. ಎರಡು ಆನೆ, 15 ಕಲಾ ತಂಡಗಳು ಇರಲಿವೆ ಎಂದರು.
ಅಂಬಾರಿಯಲ್ಲಿ ಶ್ರೀ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪಿಸಿ ಗಾಂಧಿನಗರ, ವಿದ್ಯಾಗಿರಿ, ಟೋಲ್‌ನಾಕಾ, ಎನ್‌ಟಿಟಿಎಫ್, ಸಂಗಮ ವೃತ್ತ, ಲೈನ್ ಬಜಾರ, ಟಿಕಾರೆ ರಸ್ತೆ, ಹಳೇ ಬಸ್ ನಿಲ್ದಾಣ ಮಾರ್ಗವಾಗಿ ಕಲಾಭವನ ಆವರಣದಲ್ಲಿ ಮೆರವಣಿಗೆ ಮುಕ್ತಾಯವಾಗಲಿದೆ ಎಂದರು.
ಮಂಜುಗೌಡ ಪಾಟೀಲ, ಹನುಮಂತ ಸರಾಫ, ಸುಭಾಷ ಮೋರೆ, ಪಾಂಡುರಂಗ ಕಿರೇಸೂರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net