ಸ್ಯಾಂಟ್ರೋ ರವಿ ಪ್ರಕರಣ, ನ್ಯಾಯಾಂಗ ತನಿಖೆಗೆ ಒತ್ತಾಯ

download-04
Published on

ಚಿತ್ರದುರ್ಗ: ಸದಾಶಿವ ಆಯೋಗದ ಕುರಿತು ಗೊಂದಲಗಳಿದ್ದರೂ ಎಸ್‌ಸಿ, ಎಸ್‌ಟಿ ಸಮುದಾಯಗಳ ಎಲ್ಲರೂ ಒಂದಾಗಿ ದುರ್ಗದ ಏಕತಾ ಸ ಮಾವೇಶ ಯಶಸ್ವಿಗೊಳಿಸಿದ್ದಾರೆ ಎಂದು ಮಾಜಿ ಸಂಸದ ಉಗ್ರಪ್ಪ ಹೇಳಿದರು.

ಸುಪ್ರೀಂಕೋರ್ಟ್‌ನ 37 ನ್ಯಾಯಮೂರ್ತಿಗಳ ಪೈಕಿ, 27 ಹುದ್ದೆಗಳು ಭರ್ತಿ ಇವೆ. ಇವರಲ್ಲಿ ಒಬ್ಬರೇ ಒಬ್ಬರು ದಲಿತ ನ್ಯಾಯಮೂರ್ತಿಗಳಿದ್ದಾರೆ. ದಲಿತರನ್ನು ವಂಚಿಸಲಾಗುತ್ತಿದೆ ಎಂಬುದಕ್ಕೆ ಇದೊಂದು ಉದಾಹರಣೆ. ನಿಯಮಾನುಸಾರ ಜನಗಣತಿ ನಡೆಸಿ ವಿಧಾನಸಭಾ ಹಾಗೂ ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ ಮಾಡಬೇಕು. ಆದರೆ ಬಿಜೆಪಿ 2025 ರವರೆಗೆ ಡಿಲಿಮಿಟೆಷನ್‌ಗೆ ಆಸಕ್ತಿ ತೋರಿಸಿಲ್ಲ. ಇದರಿಂದಾಗಿ 51 ಇರುವ ಮೀಸಲು ಕ್ಷೇತ್ರಗಳ ಸಂಖ್ಯೆ 60 ದಾಟುವುದಕ್ಕೆ ತಡೆಯಾಗಿದೆ. ಎಸ್‌ಸಿ, ಎಸ್‌ಟಿ ಮೀಸಲು ಪ್ರಮಾಣ ಹೆಚ್ಚಳ ಕಾಯ್ದೆಯನ್ನು ಸಂವಿಧಾನದ 9 ನೇ ಷೆಡ್ಯೂಲ್‌ಗೆ ಸೇರಿಸದಿದ್ದರೆ ಹೋರಾಟ ಅನಿವಾರ‌್ಯವಾಗುತ್ತದೆ. ಮಾನದಂಡಗಳನ್ನಾಧರಿಸಿ ಅರ್ಹರೆಲ್ಲ ಸಮುದಾಯಗಳಿಗೆ ಎಸ್‌ಸಿ, ಎಸ್‌ಸಿ ಹಾಗೂ ಒಬಿಸಿ ಮೀಸಲು ಸೌಲಭ್ಯ ಕಲ್ಪಿಸಲು ಕಾಂಗ್ರೆಸ್ ಬದ್ಧವಿದೆ ಎಂದರು.

ಬಿಜೆಪಿ ಉತ್ತರಿಸಬೇಕು

ವಿಶೇಷ ವಿಮಾನದ ಮುಖ್ಯಮಂತ್ರಿ ಎಂದು ಬಸವರಾಜ ಬೊಮ್ಮಾಯಿ ಕುರಿತ ಟೀಕೆ ಹಾಗೂ ಸಂಪುಟ ಸದಸ್ಯರೊಬ್ಬರ ಬಗ್ಗೆ ಬಿಜೆಪಿ ಶಾಸಕರೊಬ್ಬರು ಆಡಿರುವ ಅವಹೇಳನಕಾರಿ ಮಾತಿಗೆ ಬಿಜೆಪಿ ಉತ್ತರಿಸಬೇಕು.

ಯಾಕೆ ಈವರೆಗೂ ಸುಮ್ಮನಿದ್ದರು.?

ದಂಧೆಕೋರ ಸ್ಯಾಂಟ್ರೋ ರವಿ ಬಗ್ಗೆ ಯಾಕೆ ಗೃಹ ಸಚಿವರೂ ಆಗಿದ್ದ ಆರ್.ಅಶೋಕ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ‌್ಯ ದ ರ್ಶಿ ಸಿ.ಟಿ.ರವಿ ಯಾಕೆ ಈವರೆಗೂ ಸುಮ್ಮನಿದ್ದರು.?ಆರೋಪಿ ರವಿ ಬಿಜೆಪಿ ಕಾರ‌್ಯಕರ್ತರಾಗಿದ್ದರಿಂದ ಅವರನ್ನು ರಕ್ಷಣೆ ಮಾಡಲಾಗುತ್ತಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಗುಜರಾತ್‌ಗೆ ಹೋದ ಸಂದರ್ಭ ದಲ್ಲೇ,ಅಲ್ಲಿ ರವಿ ಬಂಧನವಾಗುತ್ತದೆ ಎಂದರೆ ಏನರ್ಥವೆಂದು ಪ್ರಶ್ನಿಸಿದ ಉಗ್ರಪ್ಪ,ದಲಿತ ಮಹಿಳೆಗೆ ಅನ್ಯಾಯ ಮಾಡಿರುವ ಸ್ಯಾಂಟ್ರೋ ರವಿ ಕೃತ್ಯಗಳ ವಿರುದ್ಧ ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸ ಬೇಕೆಂದು ರಾಜ್ಯಸರ್ಕಾರವನ್ನು ಒತ್ತಾಯಿಸಿದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net